ಗಾಂಜಾ ಮಾರುತ್ತಿದ್ದ ಆರೋಪಿ ಓರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಂತಲ್ ಕೇಶವ ರಾವ್ ಎಂದು ಗುರುತಿಸಿದ್ದು, ಈತನಿಂದ ಬರೋಬ್ಬರಿ 65.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫೆಬ್ರವರಿ 18 ರಂದು ನಾಗರಬಾವಿಯ ಎರಡನೇ ಹಂತದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರ ಬಂಧನವಾಗಿತ್ತು. ವಿಚಾರಣೆ ನಂತರ ಬಂಧಿತರಾದ ಸೈಯದ್ ಇಮ್ತಿಯಾಜ್ (33), ರಂಜಿತ್(21), ಪವನ್(21),ವಿನೋದ್ ಕುಮಾರ್(22) ವಂತಲ್ ಕೇಶವ ರಾವ್ ಬಗ್ಗೆ ಮಾಹಿತಿ ನೀಡಿದ್ದರು. ಅವರ ಮಾಹಿತಿಯನ್ನು ಅನುಸರಿಸಿ ಇಂದು ವಂತಲ್ ಕೇಶವನನ್ನು ಬಂಧಿಸಲಾಗಿದೆ ಎಂದು ಅನ್ನಪೂರ್ಣೇಶ್ವರಿ ನಗರದ ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಾಶಿವರಾತ್ರಿ ದಿನದಂದು ಮಾಂಸ ಮಾರಾಟ ಹಾಗೂ ಪ್ರಾಣಿವಧೆಗೆ ನಿಷೇಧ ಹೇರಿದ ಬಿಬಿಎಂಪಿ
ಈ ಮೊದಲು ಬಂಧಿಸಿದ್ದ ನಾಲ್ವರಿಂದ 7.35 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಇಂದು ಬಂಧಿಸಿರುವ ಆರೋಪಿಯಿಂದ 65.5 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಗಿದೆ. ಇವರೆಲ್ಲರು ಕರ್ನಾಟಕದ ಪವಿತ್ರ ಕ್ಷೇತ್ರ ಮಲೆ ಮಹಾದೇಶ್ವರನ ಬೆಟ್ಟದ ಬಳಿಯ ಪೊದೆಗಳಲ್ಲಿ ಮಾದಕ ವಸ್ತುಗಳನ್ನ ರಹಸ್ಯವಾಗಿ ಸಂಗ್ರಹಿಸಿಡುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಸದ್ಯ ಆರೋಪಿಗಳ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.