ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಯ ಹಲವು ಕುಗ್ರಾಮಗಳಲ್ಲಿ ಇಂಟರ್ನೆಟ್ ಸೇವೆ ಇಂದಿಗೂ ಕೂಡಾ ಮರೀಚಿಕೆಯಾಗಿದೆ. ತೀರ್ಥಹಳ್ಳಿ, ಸಾಗರ, ಹೊಸನಗರ ತಾಲೂಕುಗಳಲ್ಲಿನ ಹಲವು ಗ್ರಾಮಗಳು ನೆಟ್ವರ್ಕ್ ಸಮಸ್ಯೆಯನ್ನು ಎದುರಿಸುತ್ತಿವೆ.
ಹೀಗಾಗಿಯೇ ಲಾಕ್ ಡೌನ್ ಸಂದರ್ಭದಲ್ಲಿ ಆನ್ಲೈನ್ ಪಾಠ ಆಲಿಸುವ ಸಲುವಾಗಿ ವಿದ್ಯಾರ್ಥಿಗಳು ಮೊಬೈಲ್ ನೆಟ್ವರ್ಕ್ ಅರಸಿ ಗುಡ್ಡದ ಮೇಲೆ ಕುಳಿತ, ಮರ ಏರಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಇದೀಗ ಮಲೆನಾಡು ಭಾಗದ ನೆಟ್ವರ್ಕ್ ಸಮಸ್ಯೆಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಶಿವಮೊಗ್ಗ ಮತ್ತು ಬೈಂದೂರು ವ್ಯಾಪ್ತಿಯಲ್ಲಿ ಅತ್ಯಾಧುನಿಕ ದೂರ ಸಂಪರ್ಕ ವ್ಯವಸ್ಥೆಯಾದ ಐವತ್ನಾಲ್ಕು 4ಜಿ ಟವರ್ ಗಳನ್ನು ಮಂಜೂರು ಮಾಡಿದೆ.
ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಈ ವಿಷಯ ತಿಳಿಸಿದ್ದು, ಈ 54 ಟವರ್ ಗಳ ಪೈಕಿ ಹೊಸನಗರ 24, ಸಾಗರ 12, ಶಿವಮೊಗ್ಗ 3, ತೀರ್ಥಹಳ್ಳಿ 11 ಮತ್ತು ಬೈಂದೂರು 4 ಟವರ್ ಗಳು ಸಿದ್ಧವಾಗಲಿವೆ ಎಂದು ಹೇಳಿದ್ದಾರೆ.