alex Certify ಮಲಾಲಗೆ ತಾಲಿಬಾನ್ ಗುಂಡಿಕ್ಕಿದ್ದಾಗ ನಡೆದಿದ್ದೇನು…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಲಾಲಗೆ ತಾಲಿಬಾನ್ ಗುಂಡಿಕ್ಕಿದ್ದಾಗ ನಡೆದಿದ್ದೇನು…?

2012ರಲ್ಲಿ ಆಫ್ಘನ್ ಹೆಣ್ಣುಮಕ್ಕಳ ಪರವಾಗಿ ನಿಂತು, ತಾಲಿಬಾನಿಗಳ ಷರಿಯಾ ಕಾನೂನು ಹೆಸರಿನ ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿದ್ದು ಮಲಾಲ ಯೂಸುಫ್‍ಜಾಯಿ.

ಹೆಣ್ಣುಮಕ್ಕಳ ಶಿಕ್ಷಣದ ವಿರುದ್ಧ ಇರುವ ತಾಲಿಬಾನ್ ಉಗ್ರರು, ಶಿಕ್ಷಣದ ಪರವಾಗಿ ಹೋರಾಟ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರ್ತಿ ಮಲಾಲಳನ್ನು ಹತ್ಯೆಗೈಯಲು ತಲೆಗೆ ಗುಂಡಿಕ್ಕಿದ್ದರು.

2012ರ ಅಕ್ಟೋಬರ್‍ನಲ್ಲಿ ತಾಲಿಬಾನ್ ವಕ್ತಾರ ಎಹ್ಸಾನುಲ್ಲಾ ಎಹ್ಸಾನ್, ಮಲಾಲ ಇದ್ದ ಶಾಲಾ ಮಕ್ಕಳ ಬಸ್‍ಗೆ ಹತ್ತಿದ್ದ. ಸೀದಾ ಮಲಾಲಳ ತಲೆಗೆ ಗುಂಡಿಕ್ಕಿ ಪರಾರಿಯಾಗಿದ್ದ.

ಜೈಲಿನಿಂದ ಬಿಡುಗಡೆಯಾಗುತ್ತಲೇ ಭಯೋತ್ಪಾದಕನಿಂದ ಮಲಾಲಾಗೆ ಮತ್ತೆ ಬೆದರಿಕೆ

ಆಕೆಯ ಮುಖದ ನರಗಳು, ಕಿವಿಗೂಡು, ಹಲ್ಲಿನ ದವಡೆಗಳು ಸೀಳಿ ತುಂಡಾಗಿ ಗಂಭೀರ ಸ್ಥಿತಿಯಲ್ಲಿ ನರಳಾಡಿದ್ದಳು. ಆಕೆಗೆ ಮೊದಲು ಪೆಶಾವರ್‍ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ನಂತರ ಬರ್ಮಿಂಗ್‍ಹ್ಯಾಮ್‍ನ ಕ್ವೀನ್ ಎಲಿಜಬತ್ ಆಸ್ಪತ್ರೆಯಲ್ಲಿ ನೆರವಿನ ಹಸ್ತವಾಗಿ ಆರು ಬಾರಿ ಉಚಿತ ಶಸ್ತ್ರಚಿಕಿತ್ಸೆ ನಡೆಸಿ, ಬದುಕಿಸಲಾಗಿತ್ತು. ಇವೆಲ್ಲವನ್ನೂ ಆಕೆಯ ‘ಹೀಲಿಂಗ್ ಫ್ರಮ್ ಒನ್ ತಾಲಿಬಾನ್ ಬುಲೆಟ್’ನಲ್ಲಿ ಅನುಭವ ಕಥನದ ಪುಸ್ತಕದಲ್ಲಿ ವಿವರವಾಗಿ ಕಾಣಬಹುದಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...