
ಮಲಬದ್ಧತೆ ಒಂದು ಸಾಮಾನ್ಯ ಸಮಸ್ಯೆ. ಕೆಟ್ಟ ಆಹಾರ ಪದ್ಧತಿ, ನೀರಿನ ಕೊರತೆ ಹಾಗೂ ರಾತ್ರಿ ಊಟವಾದ ತಕ್ಷಣ ಮಲಗುವುದು ಮಲಬದ್ಧತೆಗೆ ಕಾರಣವಾಗುತ್ತದೆ. ಇದ್ರಿಂದ ಹೊಟ್ಟೆ ಸರಿಯಾಗಿ ಸ್ವಚ್ಛವಾಗುವುದಿಲ್ಲ. ಇದು ಕಿರಿಕಿರಿ, ಹೊಟ್ಟೆಯಲ್ಲಿ ಆಮ್ಲ ಉತ್ಪತ್ತಿಗೆ ಕಾರಣವಾಗುತ್ತದೆ. ಮಲಬದ್ಧತೆಯನ್ನು ನಿರ್ಲಕ್ಷ್ಯಿಸಿದ್ರೆ ಹೊಟ್ಟೆ ಹುಣ್ಣಾಗುವ ಸಂಭವ ಹೆಚ್ಚಿರುತ್ತದೆ. ಕೆಲವೊಂದು ಸರಳ ಉಪಾಯಗಳಿಂದ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು.
ಸೀಬೆಹಣ್ಣು : ಹೊಟ್ಟೆಯನ್ನು ಸ್ವಚ್ಛಗೊಳಿಸಲು ನಿಮ್ಮ ಆಹಾರದಲ್ಲಿ ಸೀಬೆ ಹಣ್ಣನ್ನು ಸೇರಿಸಿಕೊಳ್ಳಿ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸೀಬೆ ಹಣ್ಣಿಗೆ ಉಪ್ಪು ಸೇರಿಸಿ ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ. ರಾತ್ರಿ ಊಟಕ್ಕಿಂತ ಮೊದಲು ತಿನ್ನಬೇಕು. ಊಟವಾದ ನಂತ್ರ ಸೀಬೆಹಣ್ಣು ತಿಂದ್ರೆ ಮಲಬದ್ಧತೆ ಸಮಸ್ಯೆ ಹೆಚ್ಚಾಗುತ್ತದೆ.
ಉತ್ತುತ್ತೆ : ಮಲಬದ್ಧತೆ ಅನೇಕ ವರ್ಷಗಳಿಂದ ಕಾಡುತ್ತಿದ್ದರೆ ಉತ್ತುತ್ತೆ ಹೇಳಿ ಮಾಡಿಸಿದ ಔಷಧಿ. ಪ್ರತಿದಿನ ಇದನ್ನು ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂರು ಉತ್ತುತ್ತೆ ತಿಂದ ನಂತ್ರ ಬಿಸಿ ನೀರನ್ನು ಕುಡಿದ್ರೆ ಹೊಟ್ಟೆ ಕ್ಲೀನ್ ಆಗುತ್ತದೆ.
ನಿಂಬೆ ಹಣ್ಣು : ಒಂದು ನಿಂಬೆ ಹಣ್ಣಿನ ರಸವನ್ನು ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ರಾತ್ರಿ ಮಲಗುವ ಮೊದಲು ಕುಡಿಯಿರಿ. ಇದ್ರಿಂದ ಹೊಟ್ಟೆ ಸ್ವಚ್ಛವಾಗಿ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಸೇಬು : ಸೇಬು ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಹೊಟ್ಟೆಯನ್ನು ಸ್ವಚ್ಛವಾಗಿಡುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸೇಬು ತಿನ್ನುತ್ತ ಬಂದ್ರೂ ಹೊಟ್ಟೆ ಕ್ಲೀನ್ ಆಗುತ್ತದೆ.
ಅಡುಗೆ ಸೋಡಾ : ರಾತ್ರಿ ಮಲಗುವ ಮೊದಲು ಒಂದು ಚಮಚ ಅಡುಗೆ ಸೋಡಾಕ್ಕೆ ಒಂದು ಗ್ಲಾಸ್ ಬಿಸಿ ನೀರನ್ನು ಹಾಕಿ ಕುಡಿಯುವುದರಿಂದ ಬೆಳಿಗ್ಗೆ ಹೊಟ್ಟೆ ಸ್ವಚ್ಛವಾಗಿ ಮಲಬದ್ಧತೆ ಕಾಡುವುದಿಲ್ಲ.