ಮಲಬದ್ದತೆ ಸಮಸ್ಯೆ ಬಗ್ಗೆ ಹೊರಗೆ ಹೇಳಲು ಬಹುತೇಕರಿಗೆ ಮುಜುಗರ. ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.
ಪ್ರತಿನಿತ್ಯ ಚುಕ್ಕೆ ಬಾಳೆಹಣ್ಣನ್ನು ರಾತ್ರಿ ಹೊತ್ತು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ. ಪರಂಗಿ ಹಣ್ಣನ್ನು ಬೆಳಿಗ್ಗೆ ನೀರು ಕುಡಿದ ನಂತರ ಖಾಲಿ ಹೊಟ್ಟೆಯಲ್ಲಿ ತಿನ್ನಿ.
ಪ್ರತಿನಿತ್ಯ ಮೂರರಿಂದ ನಾಲ್ಕು ಲೀಟರ್ ನಷ್ಟು ನೀರು ಕುಡಿಯಿರಿ. ನೀರು ಹೆಚ್ಚು ಕುಡಿಯುವುದರಿಂದ ದೇಹದ ಶೇಕಡಾ 90 ರಷ್ಟು ರೋಗಗಳು ಮಾಯವಾಗುತ್ತವೆ.
ಹುರುಳಿ ಕಾಳು ಚೆನ್ನಾಗಿ ಬೇಯಿಸಿ, ಅದಕ್ಕೆ ಉಪ್ಪು ಮತ್ತು ನಿಂಬೆ ರಸವನ್ನು ಹಾಕಿ ಕುಡಿಯಿರಿ. ಸೋರೆಕಾಯಿಯ ರಸವನ್ನು ಹಿಂಡಿ ತೆಗೆದು ಆ ರಸಕ್ಕೆ ಉಪ್ಪು ಹಾಕಿ ಸೇವಿಸಿ.
ಗುಲ್ಕನ್ ಉತ್ತಮವಾದ ಮನೆಮದ್ದು. ಇದನ್ನು ಅನುಕೂಲಕ್ಕೆ ತಕ್ಕಂತೆ ರಾತ್ರಿ ಅಥವಾ ಬೆಳಿಗ್ಗೆ ಸೇವಿಸುವುದರಿಂದ ಮಲಬದ್ಧತೆಯ ತೊಂದರೆಗಳು ದೂರವಾಗುತ್ತವೆ.
ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ.