ವಾಸ್ತು ದೋಷ ಮನೆಯ ಮೇಲೊಂದೇ ಅಲ್ಲ ನಮ್ಮ ಶಕ್ತಿಯ ಮೇಲೂ ಪ್ರಭಾವ ಬೀರುತ್ತದೆ. ಜೀವನದ ಸಣ್ಣ ಸಣ್ಣ ಸಂಗತಿ ಮೇಲೂ ನಕಾರಾತ್ಮಕ ಹಾಗೂ ಸಕಾರಾತ್ಮಕ ಶಕ್ತಿ ಪ್ರಾಬಲ್ಯವನ್ನು ಸ್ಥಾಪಿಸುತ್ತದೆ. ಮಲಗುವ ಸ್ಥಳ, ಮಲಗುವ ಭಂಗಿಯಿಂದ ಹಿಡಿದು ಬೆಳಿಗ್ಗೆ ನಿದ್ರೆಯಿಂದ ಎದ್ದೇಳುವವರೆಗೆ ಎಲ್ಲದರ ಮೇಲೂ ವಾಸ್ತುವಿನ ಪ್ರಭಾವವಿರುತ್ತದೆ.
ಶುಭ ಫಲ ಹಾಗೂ ಯಶಸ್ಸಿಗಾಗಿ ಮಲಗುವ ಮುನ್ನ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಮಲಗುವ ವೇಳೆ ಬಾಗಿಲಿಗೆ ಕಾಲು ಹಾಕಿ ಮಲಗಬಾರದು. ತಲೆ ದಕ್ಷಿಣ ದಿಕ್ಕಿಗಿರಲಿ. ಪಾದಗಳು ಪಶ್ಚಿಮ ದಿಕ್ಕಿಗಿದ್ದರೆ ಒಳ್ಳೆಯದು.
ಸೂರ್ಯಾಸ್ತದ ನಂತ್ರ ಪೊರಕೆ ಮೂಲಕ ಮನೆಯನ್ನು ಸ್ವಚ್ಛಗೊಳಿಸಬಾರದು. ರಾತ್ರಿ ಮಲಗುವ ಮೊದಲು ಊಟ ಮಾಡಿದ ಎಲ್ಲ ಪಾತ್ರೆಗಳನ್ನು ಸ್ವಚ್ಛಗೊಳಿಸಿಡಿ. ಹೀಗೆ ಮಾಡಿದಲ್ಲಿ ಲಕ್ಷ್ಮಿ ಮನೆಯಲ್ಲಿ ಸದಾ ನೆಲೆಸಿರುತ್ತಾಳೆ. ಬಡತನ ದೂರವಾಗುತ್ತದೆ.
ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ದೇವರಿಗೆ ಪೂಜೆ ಮಾಡಬೇಕು. ಇದ್ರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ. ಯಾವ ವ್ಯಕ್ತಿ ದಿನ ಹಾಗೂ ರಾತ್ರಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಮಲ – ಮೂತ್ರ ವಿಸರ್ಜನೆ ಮಾಡ್ತಾನೋ ಅವನಿಗೆ ಲಕ್ಷ್ಮಿ ಒಲಿಯುತ್ತಾಳೆ.
ತಲೆ ಬಳಿ ಅಲರಾಂ ಇಟ್ಟು ಮಲಗಬೇಡಿ. ಜೊತೆಗೆ ವಿದ್ಯುತ್ ವಸ್ತುಗಳನ್ನು ಕೂಡ ತಲೆ ಬಳಿ ಇಟ್ಟು ಮಲಗಬಾರದು. ಇದ್ರಿಂದ ಚಿಂತೆ – ತೊಂದರೆ ಹೆಚ್ಚಾಗುತ್ತದೆ.
ಮಲಗುವ ಕೋಣೆಯಲ್ಲಿ ದೇವರನ್ನಿಡಬೇಡಿ. ಜೊತೆಗೆ ಪೂರ್ವಜರ ಚಿತ್ರವನ್ನೂ ಇಡಬಾರದು.