ಮದುವೆಯಾದ ಕೆಲವು ದಿನ ಅಥವಾ ಕೆಲ ವರ್ಷ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಸುಖ ಸಂಸಾರಿ ಎಂದುಕೊಳ್ಳುವ ಮೊದಲೇ ಸಂಸಾರದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ದಾಂಪತ್ಯದ ಬಿರುಕಿಗೆ ಪತಿ-ಪತ್ನಿ ಮಲಗುವ ರೀತಿ, ವಿಧಾನ ಕೂಡ ಒಂದು ಕಾರಣ ಎಂದ್ರೆ ನೀವು ನಂಬಲೇಬೇಕು.
ಪ್ರತಿಯೊಂದು ಸ್ಥಳದಲ್ಲಿಯೂ ಒಂದೊಂದು ಪದ್ಧತಿ, ನಿಯಮಗಳನ್ನು ಅನುಸರಿಸಲಾಗುತ್ತದೆ. ಅದೇ ರೀತಿ ಮಲಗುವ ಕೋಣೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೆಲವೊಮ್ಮೆ ತಿಳಿಯದೇ ಮಾಡಿದ ತಪ್ಪುಗಳು ದಾಂಪತ್ಯದಲ್ಲಿ ಅಪಸ್ವರ ಮೂಡಿಸುತ್ತವೆ. ಹಾಗಾಗಿ ದಂಪತಿ ಮಲಗುವ ಮೊದಲು ಕೆಲವೊಂದು ನಿಯಮಗಳನ್ನು ಪಾಲಿಸುವುದು ಸೂಕ್ತ.
ಪತಿ-ಪತ್ನಿ ಮಲಗುವ ಸಮಯದಲ್ಲಿ ಮೊದಲು ಸುಧಾರಣೆ ತರಬೇಕು. ಒಬ್ಬರು ಒಂದು ಸಮಯದಲ್ಲಿ ಇನ್ನೊಬ್ಬರು ಇನ್ನೊಂದು ಸಮಯದಲ್ಲಿ ಮಲಗಬಾರದು.
ಮಲಗುವ ಮೊದಲು ಕೈನಲ್ಲಿ ಮೊಬೈಲ್ ಇರಬಾರದು. ಮಲಗುವ ಕೋಣೆಯಲ್ಲಿ ಟಿವಿಯ ಅಗತ್ಯವಿಲ್ಲ. ಅವಶ್ಯಕ ಎನ್ನಿಸಿದಲ್ಲಿ ಮ್ಯೂಸಿಕ್ ಪ್ಲೇಯರ್ ಇಟ್ಟುಕೊಳ್ಳಬಹುದು. ಸುಮಧುರ ಸಂಗೀತ ಕೇಳಿದ್ರೆ ಒತ್ತಡ ಕಡಿಮೆಯಾಗುತ್ತದೆ. ಮಲಗುವ ವೇಳೆ ಮೊಬೈಲ್, ಟಿವಿ, ಕಂಪ್ಯೂಟರ್ ಗೆ ನೀಡುವ ಸಮಯವನ್ನು ಸಂಗಾತಿಗೆ ನೀಡಿ.
ಕೆಲಸ ಮಾಡುವ ಸಂಗಾತಿಗಳು ಕಚೇರಿಯ ರಾಜಕೀಯ ಇಲ್ಲ ಸಂಬಂಧಿಕರ ಗಲಾಟೆ ಬಗ್ಗೆ ಚರ್ಚೆ ಮಾಡುವ ಬದಲು ಸಂಗಾತಿ ಜೊತೆ ಸುಂದರ ಸಮಯ ಕಳೆಯಬಹುದು. ರೋಮ್ಯಾಂಟಿಕ್ ಮಾತುಗಳ ಮೂಲಕ ಮಲಗುವ ಸಮಯವನ್ನು ಸುಂದರಗೊಳಿಸಬಹುದು.
ಪರಸ್ಪರ ಗಮನವಿರಲಿ. ಮಲಗುವ ಮೊದಲು ನೀವೆಷ್ಟು ಪ್ರೀತಿ ಮಾಡುತ್ತೀರಾ ಹಾಗೆ ಸಂಗಾತಿ ನಿಮಗೆಷ್ಟು ಸ್ಪೆಷಲ್ ಎಂಬುದನ್ನು ಹೇಳಿ. ತಿಂಗಳಿಗೊಮ್ಮೆಯಲ್ಲ ಪ್ರತಿದಿನ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿಕೊಳ್ಳಿ.
ಭಿನ್ನವಾದ ರೀತಿಯಲ್ಲಿ ಪ್ರೀತಿಯನ್ನು ತೋರಿಸಿ. ಮುತ್ತು, ಸ್ಪರ್ಶ, ಮಾತು ಎಲ್ಲವೂ ಈ ಸಾಲಿನಲ್ಲಿ ಸೇರುತ್ತದೆ.
ಶುಭ ರಾತ್ರಿ ಹೇಳುವುದನ್ನು ಮರೆಯಬೇಡಿ. ಈ ಸಣ್ಣ ಸಣ್ಣ ವಿಚಾರಗಳೇ ಪರಿಸ್ಥಿತಿಯನ್ನು ಸುಂದರಗೊಳಿಸುತ್ತದೆ. ಹಾಗೆ ದಂಪತಿ ನಡುವೆ ಪ್ರೀತಿ ಹೆಚ್ಚಾಗಲು ಕಾರಣವಾಗುತ್ತದೆ.