ಮನುಷ್ಯನ ಜೀವನದಲ್ಲಿ ವಾಸ್ತುಶಾಸ್ತ್ರ ಮಹತ್ವದ ಪಾತ್ರ ವಹಿಸುತ್ತದೆ. ಸುಖ-ಶಾಂತಿ ಮೇಲೆ ವಾಸ್ತುಶಾಸ್ತ್ರದ ಪ್ರಭಾವವಿರುತ್ತದೆ. ವಾಸ್ತು ಪರಿಹಾರಕ್ಕೆ ಏನೆಲ್ಲ ಸುಲಭ ಉಪಾಯಗಳನ್ನು ಅನುಸರಿಸಬೇಕೆಂದು ಈ ಹಿಂದೆ ಹೇಳಲಾಗಿದೆ.
ಮಲಗುವ ಕೋಣೆ ಹಾಗೂ ಮಲಗುವ ರೀತಿ ಕೂಡ ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಹಾಗಾಗಿ ಮಲಗುವ ಕೋಣೆಯಲ್ಲಿರುವ ವಸ್ತು, ದಿಕ್ಕಿನ ಬಗ್ಗೆ ಗಮನ ನೀಡುವ ಅವಶ್ಯಕತೆ ಇದೆ.
ಮಲಗುವ ಕೋಣೆಯಲ್ಲಿ ಪಾತ್ರೆಗಳನ್ನು ಇಡಬೇಡಿ. ಇದ್ರಿಂದ ಮನೆಯ ಮಹಿಳೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಜೊತೆಗೆ ಮನೆಯಲ್ಲಿ ಸಣ್ಣ-ಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತದೆ.
ಅನೇಕ ದಿನಗಳಿಂದ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು ನೈರುತ್ಯ ದಿಕ್ಕಿಗೆ ಮಲಗಬೇಕು.
ಪ್ರವೇಶ ದ್ವಾರದ ದಿಕ್ಕಿಗೆ ಕಾಲು ಹಾಕಿ ಮಲಗಿದ್ರೆ ಲಕ್ಷ್ಮಿ ಮುನಿಸಿಕೊಳ್ತಾಳೆ.
ಗರ್ಭಿಣಿಯರು ಗರ್ಭಕಂಠದ ಸಮಸ್ಯೆಯಿಂದ ಬಳಲುತ್ತಿದ್ದರೆ ನೈರುತ್ಯ ದಿಕ್ಕಿಗಿರುವ ಕೋಣೆಯಲ್ಲಿ ಮಲಗಬೇಕು.
ಮಲಗುವ ಕೋಣೆಯಲ್ಲಿ ಭಾರೀ ಗಾತ್ರದ ವಸ್ತುವನ್ನು ಇಡಬೇಡಿ.
ಮಲಗುವ ಕೋಣೆಯಲ್ಲಿ ಕೆಟ್ಟ ಚಟ ಮಾಡಿದ್ರೆ ಪ್ರಗತಿಗೆ ಅಡ್ಡಿಯುಂಟಾಗುತ್ತದೆ.
ನವಜಾತ ಶಿಶುವನ್ನು ಮಲಗಿಸುವ ವೇಳೆ ಪೂರ್ವ ದಿಕ್ಕಿಗೆ ತಲೆ ಇರುವಂತೆ ನೋಡಿಕೊಳ್ಳಿ.
ಹಾಸಿಗೆಯನ್ನು ಗೋಡೆಗೆ ತಾಗಿಸಬೇಡಿ. ಇದು ಪತಿ-ಪತ್ನಿ ಜಗಳಕ್ಕೆ ಕಾರಣವಾಗುತ್ತದೆ.