ಒಂದೇ ಒಂದು ಮರ ಆಳೆತ್ತರದ ತನಕ ಬೆಳೆದು ನಿಲ್ಲೋದಕ್ಕೆ ವರ್ಷಗಳೇ ಬೇಕಾಗುತ್ತೆ, ಆದರೆ ಮನುಷ್ಯ ಅದೇ ಮರವನ್ನ ತನ್ನ ಸ್ವಾರ್ಥಕ್ಕಾಗಿ ಕೆಲವೇ ಕೆಲವು ನಿಮಿಷಗಳಲ್ಲಿ ಕತ್ತರಿಸಿ ಬಿಸಾಕಿ ಬಿಡುತ್ತಾನೆ. ಆ ಮರಗಳು ಕೇವಲ ಮನುಷ್ಯರಿಗೆ ಮಾತ್ರ ಅಲ್ಲ ಪ್ರಾಣಿ ಪಕ್ಷಿಗಳಿಗೂ ಆಸರೆಯಾಗಿರುತ್ತವೆ.
ಆದರೂ ಮನುಷ್ಯ ಅದ್ಯಾವುದನ್ನೂ ಯೋಚನೆ ಮಾಡದೇ ಮರವನ್ನ ಕತ್ತರಿಸಿ ಹಾಕುತ್ತಾನೆ. ಆದರೆ ಎಷ್ಟೆ ಪಾಪ ಮಾಡಿದರೂ ಕರ್ಮ ನಮ್ಮ ಬೆನ್ನು ಬಿಡೋಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಈ ವಿಡಿಯೋ ಈಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಇನ್ಸ್ಟಾಗ್ರಾಮ್ನಲ್ಲಿ ‘videozaman1’ ಅನ್ನೋ ಅಕೌಂಟ್ನಲ್ಲಿ ಈ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಮೂವರು ವ್ಯಕ್ತಿಗಳು ಒಂದು ವಿಶಾಲ ಕಾಯದ ಮರವನ್ನ ಗರಗಸದಿಂದ ಕತ್ತರಿಸುತ್ತಾರೆ. ಮರವನ್ನ ತಳ್ಳಿ ಬೀಳಿಸುತ್ತಾರೆ.
ಬಿದ್ದ ಮರದ ಕಾಂಡ ಒಮ್ಮಿಂದೊಮ್ಮೆ ಹಿಂದೆ ಬಂದು ವ್ಯಕ್ತಿಯ ಎರಡು ಕಾಲ ಮಧ್ಯದಿಂದಲೇ ಎತ್ತಿ ಬಿಸಾಕುತ್ತೆ. ಆದರೂ ಬ್ಯಾಲೆನ್ಸ್ ಮಾಡೋಕೆ ಪ್ರಯತ್ನಪಟ್ಟರೂ ಆತ ಬಿದ್ದು ಬಿಡುತ್ತಾನೆ. ಇನ್ನುಳಿದಿಬ್ಬರು ಗಾಬರಿಯಿಂದ ಪಕ್ಕಕ್ಕೆ ಸರಿದು ಬಿಡುತ್ತಾರೆ. ನಾವು ಮಾಡಿದ್ದ ಪಾಪ ಕರ್ಮವನ್ನ ನಾವೇ ಅನುಭವಿಸಬೇಕು ಅನ್ನೋದು ಈ ವಿಡಿಯೋ ವ್ಯಕ್ತಪಡಿಸ್ತಿರೋ ಹಾಗಿದೆ. ಈ ವಿಡಿಯೋವನ್ನ ಈಗಾಗಲೇ 83 ಮಿಲಿಯನ್ ಜನರು ವೀಕ್ಷಿಸಿದ್ದಾರೆ ಮತ್ತು 3.7 ಮಿಲಿಯನ್ ಲೈಕ್ ಪಡೆದುಕೊಂಡಿದೆ.
ನೆಟ್ಟಿಗರು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಇಂತಹ ಅದೆಷ್ಟೋ ಘಟನೆಗಳು ಪ್ರತಿಯೊಬ್ಬರ ಜೀವನದಲ್ಲಿಯೂ ನಡೆದಿರುತ್ತೆ. ಅದರ ಪ್ರತಿಫಲವೂ ಅವರು ಅನುಭವಿಸಿರುತ್ತಾರೆ. ಕರ್ಮ ಯಾವತ್ತೂ ನಮ್ಮನ್ನ ಬಿಡೋಲ್ಲ `ಕರ್ಮ ಹಿಟ್ಸ್ ಬ್ಯಾಕ್` ಅಂತ ಕಾಮೆಂಟ್ ಬಾಕ್ಸ್ನಲ್ಲಿ ಬರೆದಿದ್ದಾರೆ.