ಫೆಬ್ರವರಿ 7ನ್ನು ರೋಸ್ ಡೇ ಆಗಿ ಎಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಪ್ರೀತಿಪಾತ್ರರಿಗೆ ಗುಲಾಬಿಗಳನ್ನು ನೀಡುವ ಮೂಲಕ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದು ವ್ಯಾಲೆಂಟೈನ್ಸ್ ವೀಕ್ ಆಗಿರಲಿ ಅಥವಾ ಪ್ರೀತಿಯಾಗಿರಲಿ, ಗುಲಾಬಿಗೆ ತನ್ನದೇ ಆದ ಮಹತ್ವವಿದೆ. ಈ ಹೂವು ಜನರನ್ನು ಆಕರ್ಷಿಸುವುದಲ್ಲದೆ, ಪ್ರೀತಿ ಮತ್ತು ಪ್ರಣಯದ ಸಂಕೇತವಾಗಿದೆ. ವ್ಯಾಲಂಟೈನ್ ವೀಕ್‌ನಲ್ಲಿ ಸಹಜವಾಗಿಯೇ ಗುಲಾಬಿ ಹೂವುಗಳ ಬೆಲೆ ಹೆಚ್ಚಾಗುತ್ತದೆ. ಅಗ್ಗದ ಗುಲಾಬಿ ಕೂಡ ದುಬಾರಿಯಾಗುತ್ತದೆ.
ಆದರೆ ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವು ಯಾವುದು ಗೊತ್ತಾ? ಅದರ ಬೆಲೆ ಕೇಳಿದ್ರೆ ಎಂಥವರು ಕೂಡ ಶಾಕ್ ಆಗ್ತಾರೆ. ಪ್ರಪಂಚದಾದ್ಯಂತ 16 ವಿವಿಧ ಬಣ್ಣಗಳ ಗುಲಾಬಿಗಳಿವೆ ಮತ್ತು ಪ್ರತಿಯೊಂದೂ ತನ್ನದೇ ಆದ ರೀತಿಯಲ್ಲಿ ವಿಶಿಷ್ಟವಾಗಿದೆ ಮತ್ತು ವಿಶೇಷವಾಗಿದೆ. ಇವುಗಳಲ್ಲಿ ಕೆಲವು ಸುಗಂಧ ಮತ್ತು ಸೌಂದರ್ಯಕ್ಕೆ ಪ್ರಸಿದ್ಧವಾಗಿವೆ. ಅವುಗಳನ್ನು ವಿಶ್ವದ ಅತ್ಯಂತ ದುಬಾರಿ ಗುಲಾಬಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಜೂಲಿಯೆಟ್ ಗುಲಾಬಿ ವಿಶ್ವದ ಅತ್ಯಂತ ದುಬಾರಿ ಗುಲಾಬಿಯಾಗಿದೆ.
ಈ ಗುಲಾಬಿ ಹೂವಿನ ಬೆಲೆಯನ್ನು ನೀವು ಊಹಿಸುವುದು ಕೂಡ ಅಸಾಧ್ಯ. ಜೂಲಿಯೆಟ್ ರೋಸ್ ಅನ್ನು ಶ್ರೀಮಂತರು ಕೂಡ ಖರೀದಿಸುವುದು ಕಷ್ಟ. ಈ ಹೂವು ಅರಳಲು 15 ದಿನಗಳೇ ಬೇಕು. ಸತತ 15 ವರ್ಷಗಳ ಬಳಿಕ ಜೂಲಿಯೆಟ್ ರೋಸ್ ಸಿದ್ಧವಾಗಿದೆ, ಹಾಗಾಗಿಯೇ ಈ ಹೂವಿನ ಬೆಲೆ ಬರೋಬ್ಬರಿ 112 ಕೋಟಿ ರೂಪಾಯಿ.
ಆಸ್ಟಿನ್ ಎಂಬ ವ್ಯಕ್ತಿ ಮೊದಲ ಬಾರಿಗೆ ಜೂಲಿಯೆಟ್ ರೋಸ್ ಕೃಷಿಯನ್ನು ಪ್ರಾರಂಭಿಸಿದ್ದ. ಅದನ್ನು ವಿಭಿನ್ನ ರೀತಿಯಲ್ಲಿ ಬೆಳೆಸಲು ಪ್ರಯತ್ನಿಸಿದ. ಹಲವು ಬಗೆಯ ಗುಲಾಬಿಗಳನ್ನು ಬೆರೆಸಿ ಹೊಸ ಬಗೆಯ ಗುಲಾಬಿಯನ್ನು ತಯಾರಿಸಿದ್ದ. ಅಚ್ಚರಿಯ ವಿಷಯವೆಂದರೆ ಆಸ್ಟಿನ್ ಈ ಗುಲಾಬಿಯನ್ನು ಬೆಳೆಯಲು 15 ವರ್ಷ ಪರಿಶ್ರಮಪಟ್ಟಿದ್ದ. ಕೊನೆಗೂ 2006 ರಲ್ಲಿ ಈ ಗುಲಾಬಿ ಮೊದಲ ಬಾರಿಗೆ ಯಶಸ್ವಿಯಾಗಿ ಅರಳಿತ್ತು.