ಹುಂಡೈ ವೆರ್ನಾ ದೇಶದ ಜನಪ್ರಿಯ ಕಾಂಪ್ಯಾಕ್ಟ್ ಸೆಡಾನ್‌ಗಳಲ್ಲಿ ಒಂದಾಗಿದೆ. ಶೀಘ್ರದಲ್ಲೇ ಈ ಕಾರು ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲಿದೆ. ಕಂಪನಿಯು ಈ ವಾಹನದ 4ನೇ ತಲೆಮಾರಿನ ಮಾದರಿಯನ್ನು ನಿರ್ಮಿಸಿದೆ. ಇತ್ತೀಚೆಗೆ ಹೊಸ ಹುಂಡೈ ವೆರ್ನಾದ ಕೆಲವು ಚಿತ್ರಗಳು ವೈರಲ್ ಆಗಿವೆ. ಈ ಕಾರಿನ ಕೆಲವು ಆಂತರಿಕ ವೈಶಿಷ್ಟ್ಯಗಳು ಕುತೂಹಲಕಾರಿಯಾಗಿವೆ. ಕನೆಕ್ಟ್ ಸ್ಕ್ರೀನ್ ಸೆಟಪ್ ಇದರಲ್ಲಿ ಲಭ್ಯವಾಗಲಿದೆ. ಸಾಮಾನ್ಯವಾಗಿ ಮರ್ಸಿಡಿಸ್ ಕಾರುಗಳು ಅಥವಾ ಮಹೀಂದ್ರಾ XUV700 ನಲ್ಲಿ ಈ ರೀತಿಯ ಸೆಟಪ್ ಇದೆ.
ಅಂಥದ್ದೇ ಸ್ಕ್ರೀನ್ ಸೆಟಪ್ ಅನ್ನು ಹೊಸ ಹುಂಡೈ ಕಾರಿಗೂ ಅಳವಡಿಸಲಾಗಿದೆ. ಆದ್ರೆ ಸ್ಕ್ರೀನ್‌ನ ನಿಖರವಾದ ಗಾತ್ರ ಲಭ್ಯವಾಗಿಲ್ಲ. ಇದು ಸುಮಾರು 10 ಇಂಚುಗಳಿಗಿಂತ ದೊಡ್ಡದಾಗಿದೆ. ಹುಂಡೈನ ಟಕ್ಸನ್ ಮತ್ತು ಕ್ರೆಟಾದಂತಹ ಕಾರುಗಳು 10.25-ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇ ಮತ್ತು ಡ್ರೈವರ್ ಡಿಸ್‌ಪ್ಲೇಯನ್ನು ಹೊಂದಿರುತ್ತವೆ. ಅವು ಕನೆಕ್ಟೆಡ್ ಸೆಟಪ್ ರೂಪದಲ್ಲಿಲ್ಲದಿದ್ದರೂ ಲೋಡ್ ಮಾಡಲಾದ ಫೀಚರ್ ಹೊಸದಾಗಿರುತ್ತದೆ. ಇನ್ನೂ ಹಲವು ಇಂಟ್ರೆಸ್ಟಿಂಗ್ ಫೀಚರ್‌ಗಳು ಹೊಸ ಹುಂಡೈ ವೆರ್ನಾ ಕಾರಿನಲ್ಲಿ ಇರಲಿವೆ. ಇದು ಡ್ಯುಯಲ್-ಝೋನ್ ಕ್ಲೈಮೆಟ್ ಕಂಟ್ರೋಲ್, ಏರ್ ಪ್ಯೂರಿಫೈಯರ್ ಮತ್ತು ಕನೆಕ್ಟೆಡ್ ಕಾರ್ ಟೆಕ್ನೊಂದಿಗೆ ಬರಲಿದೆ.
ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು, ವೈರ್‌ಲೆಸ್ ಫೋನ್ ಚಾರ್ಜರ್, ಸಿಂಗಲ್-ಪೇನ್ ಸನ್‌ರೂಫ್ ಮತ್ತು ಕ್ರೂಸ್ ಕಂಟ್ರೋಲ್‌ನಂತಹ ವೈಶಿಷ್ಟ್ಯಗಳನ್ನು ಸಹ ಅದರಲ್ಲಿ ಉಳಿಸಿಕೊಳ್ಳಲಾಗುತ್ತದೆ. ಇದಲ್ಲದೆ ಹೊಸ ಹುಂಡೈ ವೆರ್ನಾದಲ್ಲಿ ಸುರಕ್ಷತಾ ವೈಶಿಷ್ಟ್ಯಗಳೂ ಇರಲಿವೆ 6 ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ, ಮುಂಭಾಗ ಮತ್ತು ಹಿಂಭಾಗದ ಪಾರ್ಕಿಂಗ್ ಸಂವೇದಕಗಳು ಮತ್ತು ಎಲ್ಲಾ ನಾಲ್ಕು ಡಿಸ್ಕ್ ಬ್ರೇಕ್‌ಗಳಂತಹ ಫೀಚರ್‌ಗಳನ್ನು ಹೊಂದಿರುತ್ತದೆ.
ಮೊದಲ ಬಾರಿಗೆ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ (ADAS) ವೈಶಿಷ್ಟ್ಯವೂ ಲಭ್ಯವಿದೆ. ಹೊಸ ವೆರ್ನಾದ ಆರಂಭಿಕ ಬೆಲೆ ಸುಮಾರು 10 ಲಕ್ಷ ರೂಪಾಯಿ ಇರಲಿದೆ. 2023ರ ಎಪ್ರಿಲ್ ವೇಳೆಗೆ ಇದು ಮಾರುಕಟ್ಟೆಗೆ ಎಂಟ್ರಿ ಕೊಡಬಹುದು. ಹೋಂಡಾ ಸಿಟಿ, ವೋಕ್ಸ್‌ವ್ಯಾಗನ್ ವರ್ಟಸ್, ಮಾರುತಿ ಸಿಯಾಜ್ ಮತ್ತು ಸ್ಕೋಡಾ ಸ್ಲಾವಿಯಾದಂತಹ ಸೆಡಾನ್‌ಗಳೊಂದಿಗೆ ಈ ಕಾರು ಸ್ಪರ್ಧಿಸಲಿದೆ.