
ಮಕ್ಕಳು ಆಡುವ ಭರದಲ್ಲಿ ಎಷ್ಟು ಬಾಯಾರಿಕೆಯಾದರೂ ಸಹಿಸಿಕೊಳ್ಳುತ್ತವೆ. ನೀರು ಬೇಕೆಂದು ಕೇಳಿ ಕುಡಿಯುವುದು ಅಪರೂಪಕ್ಕೆ ಮಾತ್ರ. ಹಾಗಾಗಿ ಪೋಷಕರೇ ನೆನಪು ಮಾಡಿ ಆಗಾಗ ನೀರು ಕುಡಿಸಬೇಕಾಗುತ್ತದೆ.
ಮಕ್ಕಳಿಗೆ ರೆಡಿಮೇಡ್ ಜ್ಯೂಸ್ ಕುಡಿಯಲು ಕೊಟ್ಟು ಅವರ ಆರೋಗ್ಯವನ್ನು ಮತ್ತಷ್ಟು ಹಾಳು ಮಾಡುವ ಬದಲು ಮನೆಯಲ್ಲೇ ತಯಾರಿಸುವ ಈ ಪಾನೀಯವನ್ನು ಕುಡಿಯಲು ಕೊಟ್ಟು ಅವರ ಆರೋಗ್ಯವನ್ನು ಕಾಪಾಡಬಹುದು ಮಾತ್ರವಲ್ಲ ಡಿಹೈಡ್ರೇಷನ್ ಸಮಸ್ಯೆ ಬಾರದಂತೆ ತಡೆಗಟ್ಟಬಹುದು.
ನಿಂಬೆ ಹಣ್ಣಿನ ಜ್ಯೂಸ್ ಗೆ ಚಿಟಿಕೆ ಉಪ್ಪು ಸೇರಿಸಿ ಕುಡಿಯಲು ಕುಡಿ. ಇದನ್ನು ಕುಡಿಯುವುದರಿಂದ ಜೀರ್ಣ ಕ್ರಿಯೆ ಚುರುಕುಗೊಳ್ಳುವುದು ಮಾತ್ರವಲ್ಲ, ವಿಟಮಿನ್ ಸಿ ಸಮಸ್ಯೆಯೂ ದೂರವಾಗುತ್ತದೆ.
ಕೋಕಂ ಜ್ಯೂಸ್ ತಯಾರಿಸಿ ಕೊಡುವುದರಿಂದ ಡಿಹೈಡ್ರೇಶನ್ ದೂರವಾಗುವುದು ಮಾತ್ರವಲ್ಲ ಮಕ್ಕಳಿಗೆ ಅಗತ್ಯವಾದ ಕ್ಯಾಲ್ಸಿಯಂ ಪ್ರೊಟೀನ್ ಗಳೂ ಲಭ್ಯವಾಗುತ್ತವೆ.
ಎಳನೀರನ್ನು ಸೇವಿಸಿದರೆ ಕೆಲವು ಮಕ್ಕಳಿಗೆ ಶೀತ ಸಮಸ್ಯೆಗಳು ಕಂಡು ಬಂದಾವು ಹಾಗಾಗಿ ಇದಕ್ಕೆ ತುಸು ನೀರು, ನಿಂಬೆರಸ ಚಿಟಿಕೆ ಉಪ್ಪು ಹಾಗೂ ಜೇನುತುಪ್ಪ ಸೇರಿಸಿ ಕುಡಿಯಲು ಕೊಡಿ. ಇದರಿಂದ ಮಕ್ಕಳಿಗೆ ಪೊಟ್ಯಾಷಿಯಂ ಮತ್ತು ಮ್ಯಾಂಗನೀಸ್ ಅಂಶಗಳು ಸಾಕಷ್ಟು ದೊರೆಯುತ್ತದೆ.