ತಿನ್ನಲೇ ಬೇಕಾದ ವಸ್ತುಗಳಲ್ಲಿ ಬೆಲ್ಲ ಮತ್ತು ಕಡಲೆ ಬೀಜವೂ ಒಂದು. ಏನಿದರ ಮಹತ್ವ…?
ಕಡಲೆ ಬೀಜ ಅಥವಾ ನೆಲಕಡಲೆಯಲ್ಲಿ ಬಾದಾಮಿಯಷ್ಟೇ ಪೋಷಕಾಂಶಗಳಿವೆ. ಬಾದಾಮಿ ಬಲು ದುಬಾರಿ ಆದ್ದರಿಂದ ಎಲ್ಲರಿಗೂ ಅದನ್ನು ಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ನೆಲಕಡಲೆ ಅದಕ್ಕೆ ಅತ್ಯುತ್ತಮ ಪರ್ಯಾಯ. ಇದರಲ್ಲಿ ಪ್ರೊಟೀನ್, ಪೋಲಿಕ್ ಆಸಿಡ್ ಮತ್ತಿತರ ಅಂಶಗಳಿದ್ದು, ದೇಹಕ್ಕೆ ಗ್ಲುಕೋಸ್ ನೀಡುತ್ತದೆ. ಕಬ್ಬಿಣಾಂಶ ಕಡಿಮೆ ಇರುವವರು ಕಡ್ಡಾಯವಾಗಿ ಕಡಲೆ ಬೀಜ ಸೇವಿಸಬೇಕು.
ಬೆಲ್ಲದಿಂದ ದೇಹಕ್ಕೆ ಕೇವಲ ಸಿಹಿ ಮಾತ್ರವಲ್ಲ ಇದರಲ್ಲೂ ಕ್ಯಾಲ್ಸಿಯಂ, ಕಬ್ಬಿಣಾಂಶ ಸಾಕಷ್ಟಿದೆ. ಮುಖ್ಯವಾಗಿ ಮುಟ್ಟಿನ ಸಮಯದಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆಗಳಿಗೆ ಬೆಲ್ಲ ಅತ್ಯುತ್ತಮ ಪರಿಹಾರ ನೀಡುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಸರಿಯಾಗಿ ನಿರ್ವಹಿಸಲು ಕಡ್ಲೆ ಹಾಗೂ ಬೆಲ್ಲ ಬಹುಮುಖ್ಯ. ಜೀರ್ಣಕ್ರಿಯೆ ಬಳಿಕ ಉಳಿಯುವ ವಿಷಕಾರಿ ಅಂಶಗಳನ್ನು ಇದು ದೇಹದಿಂದ ಹೊರಹಾಕುತ್ತದೆ. ಇದರಿಂದ ತ್ವಚೆಯ ಸೌಂದರ್ಯವೂ ಹೆಚ್ಚುತ್ತದೆ ಎಂಬುದು ಆಸಕ್ತ ಸಂಗತಿ.
ಮಕ್ಕಳು ಇದನ್ನು ತಿನ್ನುವುದರಿಂದ ಅವರ ಹಲ್ಲು ಹಾಗೂ ಮೂಳೆ ಗಟ್ಟಿಯಾಗುತ್ತದೆ. ಇಂದಿಗೂ ಮಳಿಗೆಗಳಲ್ಲಿ ಸಿಗುವ ಚಿಕ್ಕಿ ಅಥವಾ ಕಡ್ಲೆ ಬೆಲ್ಲ ಮಿಶ್ರಣದ ಸಿಹಿ ತಿಂಡಿಗೆ ಹೆಚ್ಚಿನ ಬೇಡಿಕೆ ಇದೆ. ಮನೆಯಲ್ಲಿ ಇದನ್ನು ತಯಾರಿಸುವುದು ಕಷ್ಟವಾದರೆ ಹೊರಗಿನಿಂದ ತಂದಾದರೂ ತಿನ್ನಿ ಹಾಗೂ ಮಕ್ಕಳಿಗೆ ತಿನ್ನಿಸಿ.