ಆರಂಭ ಚೆನ್ನಾಗಿದ್ರೆ ದಿನ ಆರಾಮವಾಗಿ ಕಳೆಯುತ್ತದೆ. ಇಡೀ ದಿನ ಸಂತೋಷದಿಂದ ಕಳೆಯಬೇಕೆನ್ನುವವರು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬೇಡಿ. ಬೆಳಿಗ್ಗೆ ಎದ್ದ ತಕ್ಷಣ ನಾವು ಮಾಡುವ ಕೆಲ ಕೆಲಸಗಳು ನಮ್ಮ ಮನಸ್ಥಿತಿಯನ್ನು ಹಾಳು ಮಾಡುತ್ತದೆ. ನಾವು ಖಿನ್ನತೆಗೊಳಗಾಗಲು ಕಾರಣವಾಗುತ್ತದೆ. ಕೋಪಕ್ಕೆ ಕಾರಣವಾಗಬಹುದು.
ಬೆಳಿಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಯಾವುದೇ ವ್ಯಕ್ತಿಯ ಮುಖವನ್ನು ನೋಡಬೇಡಿ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಶಕ್ತಿಯ ಪ್ರಸರಣವಿದೆ. ಬೆಳಿಗ್ಗೆ ನಿದ್ರೆಯಿಂದ ಎದ್ದಾಗ ನಿಮ್ಮ ದೇಹವು ನಿಶ್ಚಲವಾಗುತ್ತದೆ. ನೀವು ಇತರರ ಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತೀರಿ. ಯಾರಾದರೂ ನಕಾರಾತ್ಮಕ ಶಕ್ತಿಯ ಪ್ರಭಾವಕ್ಕೆ ಒಳಗಾಗಿದ್ದರೆ ನೀವೂ ಸಹ ಅದರ ಪ್ರಭಾವಕ್ಕೆ ಒಳಗಾಗಬಹುದು.
ಹಾಗೆ ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿಕೊಳ್ಳಬೇಡಿ. ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿದ್ರೆ ಋಣಾತ್ಮಕ ಶಕ್ತಿ ಪ್ರಭಾವ ನಿಮ್ಮ ಮೇಲಾಗುತ್ತದೆ.
ಬೆಳಿಗ್ಗೆ ಎದ್ದ ತಕ್ಷಣ ದೇವರನ್ನು ಧ್ಯಾನಿಸಿ. ದೇವರ ಫೋಟೋ ನೋಡಿ. ಅದು ಸಾಧ್ಯವಿಲ್ಲವೆಂದ್ರೆ ನಿಮ್ಮ ಅಂಗೈ ನೋಡಿಕೊಳ್ಳಿ. ಇದು ನಿಮ್ಮ ಆತ್ಮವಿಶ್ವಾಸ ಹಾಗೂ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬೆಳಿಗ್ಗೆ ಎದ್ದ ನಂತ್ರ ಉಪಹಾರ ಸೇವನೆ ಮಾಡುವ ಮೊದಲು ಯಾವುದೇ ಪ್ರಾಣಿಯ ಹೆಸರನ್ನು ಹೇಳಬೇಡಿ. ಹಾಗೆ ಪ್ರಾಣಿಗೆ ಆಹಾರ ನೀಡಬೇಡಿ. ಮೊದಲ ರೊಟ್ಟಿಯನ್ನು ಪ್ರಾಣಿಗೆ ತೆಗೆದಿಟ್ಟು ನೀವು ಸೇವಿಸಿ. ಆಹಾರ ಸೇವನೆ ಮಾಡಿದ ನಂತ್ರ ಪ್ರಾಣಿಗೆ ಆಹಾರ ನೀಡಿ.
ದಿನ ಸಕಾರಾತ್ಮಕವಾಗಿರಬೇಕು. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ಜಗಳವಾಡಬೇಡಿ. ಇದು ಇಡೀ ದಿನವನ್ನು ಹಾಳು ಮಾಡುತ್ತದೆ.