ಪುಣ್ಯ ಪ್ರಾಪ್ತಿಗಾಗಿ ಜನರು ದೇವರ ಪೂಜೆ, ದಾನ, ಧರ್ಮ ಮಾಡ್ತಾರೆ. ಆದ್ರೆ ಕೆಲವೊಮ್ಮೆ ನಾವು ಮಾಡುವ ಕೆಲಸ ಪುಣ್ಯದ ಬದಲು ಪಾಪಕ್ಕೆ ಕಾರಣವಾಗುತ್ತದೆ. ವಾಲ್ಮೀಕಿ ರಾಮಾಯಣದಲ್ಲಿ ಇಂತಹದ್ದೆ ಮೂರು ವಿಷಯಗಳ ಬಗ್ಗೆ ಹೇಳಲಾಗಿದೆ. ಮರೆತೂ ವ್ಯಕ್ತಿ ಈ ಕೆಲಸ ಮಾಡಿದ್ರೆ ಆತ ಈವರೆಗೆ ಮಾಡಿದ ಪುಣ್ಯವೆಲ್ಲ ನಾಶವಾಗಿ ಪಾಪ ಸುತ್ತಿಕೊಳ್ಳುತ್ತದೆ.
ಬೇರೆಯವರ ವಸ್ತುವಿಗೆ ಆಸೆಪಡುವುದು ಪಾಪದ ಕೆಲಸ. ಬೇರೆಯವರ ವಸ್ತುವನ್ನು ಕಳ್ಳತನದಿಂದ ಅಥವಾ ವಂಚನೆಯಿಂದ ಪಡೆದುಕೊಂಡಲ್ಲಿ ಪುಣ್ಯವೆಲ್ಲ ನಾಶವಾಗುತ್ತದೆ. ಕಳ್ಳತನದಿಂದ ಪಡೆದ ವಸ್ತುವಿನಿಂದ ಸಂತೋಷ ಸಿಗುವುದಿಲ್ಲ. ಬದಲಾಗಿ ನಷ್ಟ, ನೋವುಣ್ಣಬೇಕಾಗುತ್ತದೆ. ಜೀವನ ಪೂರ್ತಿ ದುಃಖದಲ್ಲಿ ಕಾಲ ಕಳೆಯಬೇಕಾಗುತ್ತದೆ.
ಕೆಲವರು ಬೇರೆ ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡ್ತಾರೆ. ಸರಿ-ತಪ್ಪುಗಳನ್ನು ನೋಡದೆ ಅವರ ಜೊತೆ ಸಂಬಂಧ ಬೆಳೆಸ್ತಾರೆ. ಧರ್ಮ ಗ್ರಂಥದಲ್ಲಿ ಇದನ್ನು ಮಹಾ ಪಾಪವೆಂದು ಪರಿಗಣಿಸಲಾಗಿದೆ. ಈ ಪಾಪಕ್ಕೆ ಯಾವುದೇ ಪ್ರಾಯಶ್ಚಿತವಿಲ್ಲ. ಈ ಪಾಪದ ಕೆಲಸ ಮಾಡಿದವರು ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಹೆಚ್ಚಿನ ಜನರು ತಮ್ಮ ಸ್ನೇಹಿತರು ಹಾಗೂ ಸಂಬಂಧಿಕರ ಮೇಲೆ ಅತಿಯಾಗಿ ನಂಬಿಕೆ ಇಟ್ಟುಕೊಂಡಿರುತ್ತಾರೆ. ಇಂತ ವ್ಯಕ್ತಿಗಳಿಗೆ ಮೋಸ ಮಾಡುವುದು ಹಾಗೂ ಅವರ ವಿಶ್ವಾಸಕ್ಕೆ ಧಕ್ಕೆ ತರುವುದು ಕೂಡ ಪಾಪದ ಕೆಲಸ. ಆ ಕ್ಷಣಕ್ಕೆ ಲಾಭವಾದ್ರೂ ನಂತ್ರ ದುಃಖದಲ್ಲಿ ಕೈ ತೊಳೆಯಬೇಕಾಗುತ್ತದೆ. ಇಂತ ವ್ಯಕ್ತಿ ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ.