ವ್ಯಕ್ತಿಯ ಜನನ ಹಾಗೂ ಮರಣ ದೇವರ ಕೈನಲ್ಲಿದೆ. ಯಾವಾಗ ಮನುಷ್ಯ ಈ ಭೂಮಿಯನ್ನು ಬಿಟ್ಟು ಹೋಗ್ತಾನೆ ಎಂಬುದು ಯಾರಿಗೂ ತಿಳಿದಿರೋದಿಲ್ಲ. ಆದ್ರೆ ಗರುಡ ಪುರಾಣದಲ್ಲಿ ಇದಕ್ಕೆ ಸಂಬಂಧಿಸಿದಂತೆ ಕೆಲ ಸಂಗತಿಗಳನ್ನು ಹೇಳಲಾಗಿದೆ. ಯಾವ ಕೆಲಸವನ್ನು ಮಾಡಿದ್ರೆ ವ್ಯಕ್ತಿಯ ಆಯಸ್ಸು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗಿದೆ.
ಅನೇಕ ಸಂಗತಿಗಳು ನಮಗೆ ತಿಳಿದಿರೋದಿಲ್ಲ. ಸಮಯವಲ್ಲದ ಸಮಯದಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡ್ತೇವೆ. ಇದು ನಮಗೆ ಗೊತ್ತಿಲ್ಲದೆ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ಅನೇಕ ಜನರಿಗೆ ಬೆಳಗಾಗುವುದೇ ಇಲ್ಲ. ಸೂರ್ಯ ನೆತ್ತಿಗೆ ಬಂದ್ರೂ ಮಲಗಿರುವವರಿದ್ದಾರೆ. ತಡವಾಗಿ ಏಳುವುದು ಆರೋಗ್ಯಕ್ಕೆ ಹಾನಿಕರ. ಬ್ರಾಹ್ಮಿ ಮುಹೂರ್ತದ ಒಳ್ಳೆಯ ಗಾಳಿಯನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದ್ರಿಂದ ನಮ್ಮ ಶರೀರ ದುರ್ಬಲವಾಗುತ್ತದೆ. ಅನೇಕ ರೋಗಗಳು ಆವರಿಸಿಕೊಳ್ಳುತ್ತವೆ.
ಮೃತ ವ್ಯಕ್ತಿಯ ದೇಹದಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಗಳಿರುತ್ತವೆ. ದೇಹ ಸುಟ್ಟಾಗ ಕೆಲವೊಂದು ಬ್ಯಾಕ್ಟೀರಿಯಾ ಸುಟ್ಟು ಹೋಗುತ್ತದೆ. ಮತ್ತೆ ಕೆಲ ವೈರಸ್ ಗಾಳಿಯಲ್ಲಿ ಸೇರಿಕೊಂಡು ಸೋಂಕು ಹರಡುತ್ತದೆ. ಹಾಗಾಗಿ ಸ್ಮಶಾನದಿಂದ ದೂರ ಇರುವುದು ಒಳ್ಳೆಯದು.
ಗರುಡ ಪುರಾಣದ ಪ್ರಕಾರ ರಾತ್ರಿ ಮೊಸರು ಸೇವನೆ ಮಾಡುವುದರಿಂದ ಆಯಸ್ಸು ಕಡಿಮೆಯಾಗುತ್ತದೆ. ಮೊಸರು ನಮ್ಮ ದೇಹಕ್ಕೆ ಬಹಳ ಒಳ್ಳೆಯದು. ಆದ್ರೆ ರಾತ್ರಿ ಮೊಸರು ಸೇವನೆ ಹಾನಿಕಾರಕ. ರಾತ್ರಿ ಊಟದ ನಂತ್ರ ನಾವು ದೈಹಿಕ ಕೆಲಸ ಮಾಡುವುದಿಲ್ಲ. ಇದ್ರಿಂದ ಮಾಡಿದ ಊಟ ಸರಿಯಾಗಿ ಜೀರ್ಣವಾಗುವುದಿಲ್ಲ. ಕೆಲ ರೋಗಗಳಿಂದ ಬಳಲಬೇಕಾಗುತ್ತದೆ.
ಗರುಡ ಪುರಾಣದ ಪ್ರಕಾರ ಹಳಸಿದ ಮಾಂಸ ಸೇವನೆ ಮಾಡಬಾರದು. ಇದ್ರಲ್ಲಿ ಬ್ಯಾಕ್ಟೀರಿಯಾ ಹಾಗೂ ವೈರಸ್ ಜಾಸ್ತಿ ಇರುತ್ತದೆ. ಇಂತ ಮಾಂಸ ಸೇವನೆ ಮಾಡುವುದರಿಂದ ಬ್ಯಾಕ್ಟೀರಿಯಾ ದೇಹದೊಳಗೆ ಸೇರಿ ಅನೇಕ ರೋಗಗಳಿಗೆ ಕಾರಣವಾಗುತ್ತದೆ.