
ಈ ವಿಡಿಯೋವನ್ನು ಉದ್ಯಮಿ ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ವಿಡಿಯೋದಲ್ಲಿ, ವ್ಯಕ್ತಿಯು ಮೊದಲು ಮರದ ವಸ್ತುಗಳನ್ನು ಜೋಡಿಸಿ ಮತ್ತು ಭಾಗಗಳನ್ನು ಬಿಗಿಯಾಗಿ ಸರಿಪಡಿಸುವುದನ್ನು ಕಾಣಬಹುದು. ನಂತರ ಅವರು ಸಿದ್ಧವಾದ ಮರದ ಟ್ರೆಡ್‌ಮಿಲ್‌ನ ನಿಂತು ಮರದ ರಾಡ್‌ಗಳು ಕೆಳಗೆ ವೇಗವಾಗಿ ಉರುಳುತ್ತಿರುವುದನ್ನು ಪ್ರದರ್ಶಿಸಿದ್ದಾರೆ.
ಮೊದಲಿಗೆ ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ಅರುಣ್ ಭಾಗವತಲಾ ಎಂಬುವವರು ಹಂಚಿಕೊಂಡಿದ್ದಾರೆ. ವಿದ್ಯುತ್ ಇಲ್ಲದೆ ಕೆಲಸ ಮಾಡುವ ಅದ್ಭುತ ಟ್ರೆಡ್‌ಮಿಲ್ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ಬಳಿಕ ವಿಡಿಯೋ ಹಂಚಿಕೊಂಡ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಕೂಡ ವ್ಯಕ್ತಿಯ ಕರಕುಶಲತೆಗೆ ಪ್ರಭಾವಿತರಾಗಿದ್ದು, ತನಗೂ ಇಂಥದ್ದೊಂದು ಬೇಕು ಅಂತಾ ಟ್ವೀಟ್ ಮಾಡಿದ್ದಾರೆ.
ತೆಲಂಗಾಣ ಪೌರಾಡಳಿತ ಮತ್ತು ನಗರಾಭಿವೃದ್ಧಿ, ಐಟಿ ಸಚಿವ ಕೆ.ಟಿ. ರಾಮರಾವ್ ಕೂಡ ಪ್ರಭಾವಿತರಾಗಿದ್ದು, ಈ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ. ವ್ಯಕ್ತಿಯ ಸೃಜನಶೀಲತೆಗೆ ಸಚಿವರು ಆಶ್ಚರ್ಯಚಕಿತರಾಗಿದ್ದಾರೆ.
ಇದುವರೆಗೂ ವೈರಲ್ ಆಗಿರುವ ವಿಡಿಯೋದಲ್ಲಿರುವ ವ್ಯಕ್ತಿಯ ಗುರುತು ಮಾತ್ರ ಇನ್ನೂ ಪತ್ತೆಯಾಗಿಲ್ಲ. ಕೆಲವರು ಈ ಕಲ್ಪನೆಯನ್ನು ಇಷ್ಟಪಟ್ಟಿದ್ದಾರೆ ಮತ್ತು ಇದು ಉತ್ತಮ ಆವಿಷ್ಕಾರ ಎಂದು ಕರೆದರೆ, ಇತರರು ವಿದ್ಯುತ್ ಇಲ್ಲದೆ ಕೆಲಸ ಮಾಡುವ ಟ್ರೆಡ್‌ಮಿಲ್‌ಗಳನ್ನು ಈಗಾಗಲೇ ಹೈದರಾಬಾದ್‌ನ ಕೆಲವು ಜಿಮ್‌ಗಳಲ್ಲಿ ಸ್ಥಾಪಿಸಲಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.