
ಆದರೆ ತೆಲಂಗಾಣದ ವ್ಯಕ್ತಿಯೊಬ್ಬ ಪರಿಸರ ಸ್ನೇಹಿ ಟ್ರೆಡ್ಮಿಲ್ ಒಂದನ್ನು ಕಂಡು ಹಿಡಿದಿದ್ದಾರೆ. ಈ ಟ್ರೆಡ್ ಮಿಲ್ನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತೆಲಂಗಾಣದ ಐಟಿ ಸಚಿವ, ಕೆಟಿ ರಾಮ ರಾವ್, ಈ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಿ ಟ್ವೀಟ್ ಮಾಡಿದ್ದು, ಈ ವ್ಯಕ್ತಿಯ ಸೃಜನಶೀಲತೆಯಿಂದ ಆಶ್ಚರ್ಯಚಕಿತರಾದ ಕೆಟಿಆರ್ ಇವರನ್ನು ಸಂಪರ್ಕಿಸಿ ಇನ್ನೂ ಹೆಚ್ಚಿನ ಟ್ರೆಡ್ಮಿಲ್ಗಳ ಉತ್ಪಾದಿಸಲು ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.
45 ಸೆಕೆಂಡ್ಗಳ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಟ್ರೆಡ್ಮಿಲ್ ನಿರ್ಮಿಸುವುದನ್ನು ಕಾಣಬಹುದಾಗಿದೆ. ಇವರು ಮರದ ತುಂಡುಗಳನ್ನು ಬಿಗಿಯಾಗಿ ಜೋಡಿಸುತ್ತಾರೆ. ವಿಡಿಯೋದ ಕೊನೆಯಲ್ಲಿ ಮರದ ಟ್ರೆಡ್ಮಿಲ್ ನ್ನು ಬಳಸಿ ತೋರಿಸುತ್ತಾರೆ. ಅಂದಹಾಗೆ ಈ ಟ್ರೆಡ್ಮಿಲ್ಗೆ ವಿದ್ಯುತ್ನ ಅವಶ್ಯಕತೆ ಕೂಡ ಇಲ್ಲ.