alex Certify ಮರಣದ ಬಳಿಕ ಕುಟುಂಬಸ್ಥರ ತಲೆ ಬೋಳಿಸುವುದೇಕೆ ? ಪುರಾಣದಲ್ಲಿ ವಿವರಿಸಲಾಗಿದೆ ಈ ಸಂಪ್ರದಾಯದ ಹಿಂದಿನ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮರಣದ ಬಳಿಕ ಕುಟುಂಬಸ್ಥರ ತಲೆ ಬೋಳಿಸುವುದೇಕೆ ? ಪುರಾಣದಲ್ಲಿ ವಿವರಿಸಲಾಗಿದೆ ಈ ಸಂಪ್ರದಾಯದ ಹಿಂದಿನ ಕಾರಣ

ಹಿಂದೂ ಧರ್ಮದಲ್ಲಿ ಆಚರಣೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಮಗುವಿನ ಜನನದಿಂದ ಒಬ್ಬ ವ್ಯಕ್ತಿಯ ಮರಣದವರೆಗೆ  ಜೀವನದುದ್ದಕ್ಕೂ ವಿವಿಧ ರೂಢಿ, ನಂಬಿಕೆ, ಸಂಪ್ರದಾಯಗಳನ್ನು ಅನುಸರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯ ಮರಣದ ಬಳಿಕ ಅಂತಿಮ ಸಂಸ್ಕಾರಕ್ಕೂ ಅನೇಕ ನಿಯಮಗಳಿರುತ್ತವೆ. ಇವುಗಳನ್ನು ಪಾಲಿಸುವುದರಿಂದ ಸತ್ತವರ ಆತ್ಮ ಸ್ವತಂತ್ರವಾಗುತ್ತದೆ ಎಂಬ ನಂಬಿಕೆ ಇದೆ.

ಈ ನಿಯಮಗಳನ್ನು ಅನುಸರಿಸದಿದ್ದರೆ ಆತ್ಮವು ಭೂಮಿಯ ಮೇಲೆ ಅಲೆದಾಡುತ್ತಿರುತ್ತದೆ ಎನ್ನಲಾಗುತ್ತದೆ. ಅಂತ್ಯಕ್ರಿಯೆಯ ಸಮಯದಲ್ಲಿ ತಲೆ ಬೋಳಿಸುವ ಸಂಪ್ರದಾಯ ಕೂಡ ಅನೇಕ ಕಡೆಗಳಲ್ಲಿದೆ. ಒಬ್ಬ ವ್ಯಕ್ತಿಯ ಮರಣದ ನಂತರ ಅವರ ಬಗ್ಗೆ ಇರುವ ಗೌರವವನ್ನು ವ್ಯಕ್ತಪಡಿಸಲು ಕುಟುಂಬದ ಸದಸ್ಯರು ಕ್ಷೌರ ಮಾಡಿಸಿಕೊಳ್ಳುತ್ತಾರೆ.

ಸಾವಿನ ಬಳಿಕ ದೇಹವು ಕೊಳೆಯಲು ಪ್ರಾರಂಭಿಸುತ್ತದೆ. ಅದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಸಮಯದಲ್ಲಿ ಕುಟುಂಬ ಸದಸ್ಯರು ಮನೆಯಿಂದ ಸ್ಮಶಾನಕ್ಕೆ ಕೊಂಡೊಯ್ಯುವಾಗ ಮೃತದೇಹವನ್ನು ಹಲವಾರು ಬಾರಿ ಸ್ಪರ್ಶಿಸುತ್ತಾರೆ. ಇದರಿಂದಾಗಿ ಅವರು ಆ ಹಾನಿಕಾರಕ ಬ್ಯಾಕ್ಟೀರಿಯಾಗಳೊಂದಿಗೆ ಸಂಪರ್ಕಕ್ಕೆ ಬರುತ್ತಾರೆ. ಆ ಬ್ಯಾಕ್ಟೀರಿಯಾ ಅವರ ಕೂದಲಿಗೆ ಅಂಟಿಕೊಳ್ಳುತ್ತದೆ.

ಸ್ನಾನ ಮಾಡಿದ ನಂತರವೂ ಬ್ಯಾಕ್ಟೀರಿಯಾಗಳು ಇರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಶ ಮುಂಡನ ಮಾಡಲಾಗುತ್ತದೆ. ಹಿಂದೂ ಧರ್ಮದ ಪ್ರಕಾರ ಕುಟುಂಬದಲ್ಲಿ ಮಗು ಜನಿಸಿದಾಗ 11 ದಿನಗಳವರೆಗೆ ಆ ಕುಟುಂಬದ ಸದಸ್ಯರು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಅದೇ ರೀತಿ  ಕುಟುಂಬದ ಸದಸ್ಯರ ಮರಣದ ನಂತರ ಕೂಡ ಸೂತಕವಿರುತ್ತದೆ. ಈ ಸಮಯದಲ್ಲಿ ಧಾರ್ಮಿಕ ಆಚರಣೆಗಳನ್ನು ನಿಷೇಧಿಸಲಾಗಿದೆ.

ತಲೆ ಬೋಳಿಸಿದ ನಂತರವೇ ಇದು  ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ. ಗರುಡ ಪುರಾಣದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಅವನ ಆತ್ಮವು ದೇಹವನ್ನು ಬಿಡಲು ಸಿದ್ಧವಿರುವುದಿಲ್ಲ ಎಂದು ಹೇಳಲಾಗಿದೆ. ಯಮರಾಜನನ್ನು ಬೇಡಿಕೊಂಡ ನಂತರ ಯಮಲೋಕದಿಂದ ಹಿಂತಿರುಗುತ್ತಾರೆ, ಕುಟುಂಬವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ದೇಹವೇ ಇರದ ಕಾರಣ ಮನೆಯವರನ್ನು ಸಂಪರ್ಕಿಸಲು ಕುಟುಂಬದ ಸದಸ್ಯರ ಕೂದಲಿನ ಬೆಂಬಲವನ್ನು ಆತ್ಮ ತೆಗೆದುಕೊಳ್ಳುತ್ತದೆ ಎಂದೂ ಹೇಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...