
ಶ್ರೀಕೃಷ್ಣನ ನಾಡು ಉಡುಪಿಯಿಂದ ಸುಮಾರು 6 ಕಿಲೋ ಮೀಟರ್ ದೂರದಲ್ಲಿರುವ ಮಲ್ಪೆ, ಕಡಲ ತೀರವನ್ನು ಹೊಂದಿದ ಪಟ್ಟಣವಾಗಿದೆ.
ಮಲ್ಪೆ, ರಾಜ್ಯದ ಕರಾವಳಿಯ ಪ್ರಮುಖ ಮತ್ಸ್ಯ ಕೈಗಾರಿಕಾ ತಾಣಗಳಲ್ಲಿ ಒಂದಾಗಿದೆ. ಬಂದರು, ದೋಣಿಗಳು, ಮೀನುಗಾರರು, ಕಡಲ ಕಿನಾರೆ, ತೆಂಗಿನ ಮರ, ಹಸಿರ ರಾಶಿ, ಸಮುದ್ರದೊಳಗೆ ಚಾಚಿರುವ ನದಿ ಇವೆಲ್ಲವೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಅಗ್ನಿಪರ್ವತಗಳ ಬಂಡೆಗಳಿಂದ ನಿರ್ಮಿತವಾದ ವಿಶಿಷ್ಟ ಕಲ್ಲಿನ ರಚನೆ, ದ್ವೀಪಗಳು ಇವುಗಳೊಂದಿಗೆ ಸೇಂಟ್ ಮೇರಿಸ್ ಐಲ್ಯಾಂಡ್ ದ್ವೀಪಕ್ಕೆ ಹೋದರಂತೂ ನೀವು ಬೆರಗಾಗುತ್ತೀರಿ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ರಣವಿಕ್ರಮ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ
ತೀರದಿಂದ ಬೋಟ್ ನ ಮೂಲಕ ಸೇಂಟ್ ಮೇರಿಸ್ ಐಲ್ಯಾಂಡ್ ಗೆ ಕರೆದೊಯ್ಯಲಾಗುತ್ತದೆ. ಸುತ್ತಲೂ ನೀರಿನಿಂದ ಆವೃತವಾಗಿರುವ ನಿರ್ಜನ ದ್ವೀಪದಲ್ಲಿ ಪ್ರವಾಸಿಗರಿಗೆ ಹೊಸ ಅನುಭವ ಸಿಗುತ್ತದೆ.
ಬಲರಾಮ ಮತ್ತು ಅನಂತೇಶ್ವರ ದೇವಾಲಯಗಳು ನೋಡಬಹುದಾದ ಸ್ಥಳಗಳಾಗಿವೆ. ಭೌಗೋಳಿಕ ವೈಶಿಷ್ಟ್ಯತೆಯಿಂದಾಗಿ ಮಲ್ಪೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯುತ್ತದೆ. ಕೃಷಿ, ಮೀನುಗಾರಿಕೆ, ಇಲ್ಲಿನ ಪ್ರಮುಖ ಕಸುಬುಗಳಾಗಿವೆ. ಉಡುಪಿಯ ಉಪ ನಗರದಂತಿರುವ ಮಲ್ಪೆಗೆ ಒಮ್ಮೆ ಹೋಗಿಬನ್ನಿ.
ರಾಜ್ಯದ ಪ್ರಮುಖ ಸ್ಥಳಗಳಿಂದ ಉಡುಪಿಗೆ ಬಸ್ ಸಂಪರ್ಕವಿದೆ. ಮಂಗಳೂರು ವಿಮಾನ ನಿಲ್ದಾಣ, ಹತ್ತಿರದಲ್ಲೇ ರೈಲು ನಿಲ್ದಾಣವಿದೆ. ಜೊತೆಗೆ ಉಳಿಯಲು ವ್ಯವಸ್ಥೆಗಳಿವೆ.
ಉಡುಪಿ, ಮಲ್ಪೆ ಸುತ್ತಮುತ್ತ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿದ್ದು, ಮೊದಲೇ ಮಾಹಿತಿ ಪಡೆದುಕೊಂಡು ಹೋದರೆ ಅನುಕೂಲವಾಗುತ್ತದೆ.