
ವಿದ್ಯಾಭ್ಯಾಸದ ಹೆಸರಲ್ಲಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕಗಳ ಹೊರೆಯನ್ನು ಹೇರಬಾರದು. ಈ ಮೂಲಕ ಅವರುಗಳಿಗೆ ಒತ್ತಡ ನೀಡಬಾರದು ಎಂದು ಶಿಕ್ಷಣ ತಜ್ಞರು ಹೇಳುತ್ತಲೇ ಇರುತ್ತಾರೆ. ಆದರೂ ಕೂಡ ವಿದ್ಯಾರ್ಥಿಗಳ ಬವಣೆ ತಪ್ಪುತಿಲ್ಲ.
ಶೈಕ್ಷಣಿಕ ಚಟುವಟಿಕೆಯನ್ನು ಹೊರತುಪಡಿಸಿ ಇತರೆ ಚಟುವಟಿಕೆಗಳತ್ತಲೂ ಗಮನ ಹರಿಸಲಿ ಎಂಬ ಕಾರಣಕ್ಕೆ ‘ನೋ ಬ್ಯಾಗ್ ಡೇ’ ನಿಯಮವನ್ನು ಕೆಲ ಶಾಲೆಗಳು ಆರಂಭಿಸುತ್ತಿದ್ದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಒಂದಷ್ಟು ರಿಲೀಫ್ ಸಿಗುತ್ತಿದೆ.
ಇದರ ಮಧ್ಯೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗಿದ್ದು ಮನಕಲಕುವಂತಿದೆ. ಪುಟ್ಟ ಹುಡುಗಿಯೊಬ್ಬಳು ಒಂದು ಕೈಯಲ್ಲಿ ಟಿಫನ್ ಬಾಕ್ಸ್ ಹಾಗೂ ಬ್ಯಾಗ್ ಹಾಕಿಕೊಂಡಿದ್ದು, ಬ್ಯಾಗಿನ ಭಾರ ತಾಳಲಾರದೆ ಬೀಳುತ್ತಿರುತ್ತಾಳೆ.
ತನಗಿಂತ ಭಾರವಿರುವ ಬ್ಯಾಗನ್ನು ಆಕೆ ಹಾಕಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಇದರಿಂದ ಅಸಹಾಯಕಳಾದ ಆಕೆ ಬ್ಯಾಗ್ ಎಳೆದುಕೊಂಡು ಹೊರಟಿದ್ದು, ಇದನ್ನು ದೂರದಿಂದಲೇ ಗಮನಿಸುತ್ತಿದ್ದ ವ್ಯಕ್ತಿಯೊಬ್ಬರು ನೆರವಾಗಿದ್ದಾರೆ.
https://www.youtube.com/watch?v=S7DHmuHN9wY