ಮರ-ಗಿಡಗಳಿಂದ ನಾವು ಬದುಕಿದ್ದೇವೆ. ಈಗಿನ ದಿನಗಳಲ್ಲಿ ಶುದ್ಧ ಗಾಳಿಯ ಅವಶ್ಯಕತೆ ಹೆಚ್ಚಿದೆ. ಮನುಷ್ಯ ಸ್ವಾರ್ಥಕ್ಕೆ ಮರಗಿಡಗಳನ್ನು ಕಡಿದು ಬಯಲು ಮಾಡಿದ್ದರಿಂದ ಸಮಸ್ಯೆ ಜಾಸ್ತಿಯಾಗ್ತಿದೆ. ಪ್ರತಿಯೊಬ್ಬರೂ ಮನೆ ಆಸುಪಾಸು ಗಿಡ ಬೆಳೆಸಬೇಕಾದ ಅವಶ್ಯಕತೆಯಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲ ಮರಗಳನ್ನು ಶುಭವೆಂದು ಪರಿಗಣಿಸಿದ್ರೆ ಮತ್ತೆ ಕೆಲ ಮರಗಳನ್ನು ಅಶುಭವೆನ್ನಲಾಗುತ್ತದೆ. ಮನೆ ಮುಂದೆ ಕೆಲ ಮರಗಳಿದ್ದರೆ ದೌರ್ಭಾಗ್ಯ ಬರುತ್ತದೆ ಎಂದು ನಂಬಲಾಗಿದೆ.
ಕೆಲವರು ಮನೆ ಮುಂದೆ ಬೆರ್ರಿ ಗಿಡವನ್ನು ಬೆಳೆಸುತ್ತಾರೆ. ಬೆರ್ರಿ ಹಣ್ಣು ತಿನ್ನಲು ರುಚಿಯಾಗಿರುತ್ತದೆ. ಆದ್ರೆ ಮನೆ ಮುಂದೆ ಬೆರ್ರಿ ಗಿಡವಿದ್ದರೆ ಜೀವನದಲ್ಲಿ ಸಮಸ್ಯೆ ಎದುರಾಗುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ, ಮನೆ ಮುಂದೆ ಮುಳ್ಳಿನ ಗಿಡವನ್ನು ಬೆಳೆಸಬಾರದು. ಇದು ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.
ವಾಸ್ತು ಪ್ರಕಾರ, ಹುಣಸೆ ಮರ ಕೂಡ ನಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮನೆ ಮುಂದೆ ಹುಣಸೆ ಮರವಿದ್ದರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಭಯ, ಕೆಟ್ಟ ದೃಷ್ಟಿ ಸಮಸ್ಯೆಯುಂಟಾಗುತ್ತದೆ.
ಸಾಮಾನ್ಯವಾಗಿ ಜನರು ಮನೆ ಮುಂದೆ ಅಶ್ವತ್ಥ ಮರವನ್ನು ಬೆಳೆಸುವುದಿಲ್ಲ. ಮಳೆಗಾಲದಲ್ಲಿ ತಾನಾಗಿಯೇ ಇದು ಹುಟ್ಟಿಕೊಳ್ಳುತ್ತದೆ. ಇದನ್ನು ಜನರು ಕಡಿಯದೆ ಬೆಳೆಯಲು ಬಿಡ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆ ಮುಂದಿರುವ ಅಶ್ವತ್ಥ ಮರ ಹಣ ನಷ್ಟಕ್ಕೆ ಕಾರಣವಾಗುತ್ತದೆ. ಹಾಗೆ ಮನೆ ಮುಂದೆ ಬೆಳೆದ ಮರವನ್ನೂ ಕತ್ತರಿಸಬಾರದು ಎನ್ನಲಾಗಿದೆ. ಕತ್ತರಿಸಲು ಕೆಲ ವಿಧಿ-ವಿಧಾನಗಳನ್ನು ಅನುಸರಿಸಬೇಕಾಗುತ್ತದೆ.