ಹಿಂದೂ ಧರ್ಮದಲ್ಲಿ ತುಳಸಿಗೆ ದೇವರ ಸ್ಥಾನ ನೀಡಲಾಗಿದೆ. ವಿಷ್ಣುವಿನ ಪತ್ನಿ ತುಳಸಿಯೆಂದು ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ತುಳಸಿ ಗಿಡ ನೆಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದ್ರಿಂದ ಮನೆಯ ವಾತಾವರಣ ಪವಿತ್ರವಾಗಿರುತ್ತದೆ.
ಪ್ರತಿ ದಿನ ತುಳಸಿ ಗಿಡಕ್ಕೆ ನೀರು ಹಾಕುವುದ್ರಿಂದ ದೇವಿ ಕೃಪೆಗೆ ಪಾತ್ರರಾಗಬಹುದು. ಮನೆಯಲ್ಲಿ ತುಳಸಿ ಗಿಡ ನೆಡುವುದು ಸುಲಭ. ಆದ್ರೆ ಅದನ್ನು ಕಾಪಾಡಿಕೊಳ್ಳುವುದು ಕಷ್ಟ. ತುಳಸಿ ಗಿಡ ಬಹುಬೇಗ ಒಣಗಲು ಶುರುವಾಗುತ್ತದೆ. ಕುಟುಂಬದಲ್ಲಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ತುಳಸಿ ಗಿಡ ನೆಡುವ ಮೊದಲು ಅದ್ರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ತುಳಸಿಯನ್ನು ಸೂರ್ಯ ಗ್ರಹಣ, ಚಂದ್ರ ಗ್ರಹಣ ಹಾಗೂ ಏಕಾದಶಿ ದಿನ ಮುಟ್ಟಬಾರದು. ಗ್ರಹಣ ಮುಗಿದ ನಂತ್ರವೂ ತುಳಸಿ ಎಲೆಯನ್ನು ಕೀಳಬಾರದು. ಇದು ತುಳಸಿ ಗಿಡ ಒಣಗಲು ಕಾರಣವಾಗುತ್ತದೆ.
ಪ್ರತಿ ದಿನ ಸಂಜೆ ತುಳಸಿ ಗಿಡದ ಕೆಳಗೆ ತುಪ್ಪದ ದೀಪ ಹಚ್ಚಬೇಕು. ಪ್ರತಿ ದಿನ ತಪ್ಪದೆ ಆರತಿ ಮಾಡಬೇಕು.
ತುಳಸಿ ಗಿಡ ಒಣಗಲು ಶುರುವಾದ್ರೆ ಅದನ್ನು ಕಸಕ್ಕೆ ಹಾಕಬೇಡಿ. ಪವಿತ್ರ ನದಿಗೆ ತುಳಸಿ ಗಿಡವನ್ನು ಹಾಕಿ. ಜೊತೆಗೆ ತುಳಸಿ ಮಾತೆಯ ಕ್ಷಮೆ ಕೇಳಿ.
ಮನೆಯಲ್ಲಿ ತುಳಸಿ ಗಿಡ ಒಣಗುವುದು ಶುಭಕರವಲ್ಲ. ಮನೆಯಲ್ಲಿ ದೊಡ್ಡ ದುರ್ಘಟನೆ ನಡೆಯುವ ಸಂಕೇತವನ್ನು ಇದು ನೀಡುತ್ತದೆ. ತುಳಸಿ ಗಿಡ ಒಣಗುತ್ತಿದ್ದರೆ ತಕ್ಷಣ ಬೇರೆ ಗಿಡವನ್ನು ತಂದು ನೆಡಿ.