alex Certify ಮನೆ ಬಿಟ್ಟು ಓಡಿ ಬರುವ ಪ್ರೇಮಿಗಳಿಗಾಗಿಯೇ ಇದೆ ಈ ವಿಶೇಷ ದೇವಾಲಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಿಟ್ಟು ಓಡಿ ಬರುವ ಪ್ರೇಮಿಗಳಿಗಾಗಿಯೇ ಇದೆ ಈ ವಿಶೇಷ ದೇವಾಲಯ…!

ಮನೆ ಬಿಟ್ಟು ಓಡಿ ಹೋಗುವ ಪ್ರೇಮಿಗಳಿಗೆ ಆಸರೆಯಾಗಲೆಂದೇ ವಿಶೇಷ ದೇವಾಲಯವೊಂದಿದೆ. ಹಿಮಾಚಲ ಪ್ರದೇಶದ ಕುಲುವಿನ ಶಾಂಗರ್ ಗ್ರಾಮದಲ್ಲಿ ನಿರ್ಮಿಸಿರುವ ಶಾಂಗ್ಚುಲ್ ಮಹಾದೇವ ದೇವಸ್ಥಾನ ಇದು. ಈ ಶಿವ ದೇವಾಲಯವು ಅತ್ಯಂತ ವಿಸ್ತಾರವಾಗಿದೆ.

ಕುಲು ಕಣಿವೆಯಲ್ಲಿರುವ ಈ ದೇವಾಲಯ ಯಾವಾಗಲೂ ತೆರೆದಿರುತ್ತದೆ. ಶಾಂಗ್ಚುಲ್ ಮಹಾದೇವ್ ದೇವಾಲಯದ ಸುತ್ತಲೂ ದಟ್ಟವಾದ ಪೈನ್ ಮರಗಳು ಇವೆ, ಇದು ಅದರ  ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರೇಮಿಗಳಿಗೆ ಆಶ್ರಯ ತಾಣವಾಗಿರುವುದರಿಂದ ಈ ದೇವಾಲಯ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಮನೆ ಬಿಟ್ಟು ಓಡಿ ಬರುವ ಪ್ರೇಮಿಗಳು, ಪ್ರೀತಿಸಿ ಮದುವೆ ಮಾಡಿಕೊಳ್ಳುವ ಜೋಡಿಗಳನ್ನು ಇಲ್ಲಿನ ಜನರು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅತಿಥಿಗಳಂತೆ ಅವರನ್ನು ಸತ್ಕರಿಸಿ ರಕ್ಷಿಸುತ್ತಾರೆ. ಈ ದೇವಸ್ಥಾನದಲ್ಲಿ ಯಾವುದೇ ಜಾತಿ, ವಯಸ್ಸಿನ ಬೇಧವಿಲ್ಲದೆ ಮದುವೆಯಾಗಬಹುದು. ಇಲ್ಲಿ ಪೊಲೀಸರೂ ಹಸ್ತಕ್ಷೇಪ ಮಾಡುವಂತಿಲ್ಲ.

ಈ ದೇವಾಲಯಕ್ಕೆ ಭೇಟಿ ನೀಡುವ ಮೊದಲು ಪ್ರತಿಯೊಬ್ಬರೂ ಅನುಸರಿಸಬೇಕಾದ ಕೆಲವು ನಿಯಮಗಳಿವೆ. ಇಲ್ಲಿ ಯಾವುದೇ ವ್ಯಕ್ತಿ ಮದ್ಯ ಮತ್ತು ಸಿಗರೇಟ್ ಸೇವಿಸುವಂತಿಲ್ಲ. ಚರ್ಮದ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ. ಯಾವುದೇ ಭಕ್ತ ಅಥವಾ ದಂಪತಿಗಳು ದೇವಸ್ಥಾನಕ್ಕೆ ಕುದುರೆಯನ್ನು ಸಹ ತರುವಂತಿಲ್ಲ. ಈ ದೇವಸ್ಥಾನದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಬಾರದು.

ಅಷ್ಟೇ ಅಲ್ಲ, ಪ್ರೇಮಿಗಳ ಕುಟುಂಬಗಳು ಎರಡೂ ಕಡೆ ರಾಜಿಯಾಗುವವರೆಗೂ ವಿವಾಹಿತ ಪ್ರೇಮಿಗಳು ಇಲ್ಲಿಯೇ ಇರಬಹುದು. ದಂತಕಥೆಯ ಪ್ರಕಾರ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಇಲ್ಲಿಯೇ ಇದ್ದರಂತೆ. ಈ ಸಮಯದಲ್ಲಿ ಕೌರವರು ಅವರನ್ನು ಅನುಸರಿಸಿ ಇಲ್ಲಿಗೆ ಬಂದರು. ಆಗ ಶಂಗಚುಲ್ ಮಹಾದೇವನು ಕೌರವರನ್ನು ತಡೆದು ಇದು ನನ್ನ ಸೀಮೆ ಮತ್ತು ನನ್ನ ಆಶ್ರಯದಲ್ಲಿ ಬರುವ ಯಾರಾದರೂ ಏನು ಬೇಕಾದರೂ ಮಾಡಬಹುದು ಎಂದು ಹೇಳಿದನು. ಮಹಾದೇವನ ಭಯದಿಂದ ಕೌರವರು ಹಿಂತಿರುಗಿದರು ಎಂಬ ಪ್ರತೀತಿ ಇದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...