alex Certify ಮನೆ ಬಾಡಿಗೆ ಮೇಲೆ ಶೇ.18ರಷ್ಟು GST ಪಾವತಿಸಬೇಕಾ ? ಆತಂಕದಲ್ಲಿರುವ ಬಾಡಿಗೆದಾರರಿಗೆ ಇಲ್ಲಿದೆ ಖುಷಿ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಬಾಡಿಗೆ ಮೇಲೆ ಶೇ.18ರಷ್ಟು GST ಪಾವತಿಸಬೇಕಾ ? ಆತಂಕದಲ್ಲಿರುವ ಬಾಡಿಗೆದಾರರಿಗೆ ಇಲ್ಲಿದೆ ಖುಷಿ ಸುದ್ದಿ

ಕೇಂದ್ರ ಸರ್ಕಾರ ಹಲವಾರು ದಿನಬಳಕೆಯ ಉತ್ಪನ್ನಗಳು ಮತ್ತು ಸರಕುಗಳ ಮೇಲಿನ ಜಿ.ಎಸ್‌.ಟಿ.ಯನ್ನು ಹೆಚ್ಚಳ ಮಾಡಿದೆ. ಪರಿಣಾಮ ಗೋಧಿ, ಅಕ್ಕಿ, ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್‌ಗಳು ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳ ಬೆಲೆ ಈಗಾಗ್ಲೇ ಗಗನಕ್ಕೇರಿದೆ.

ಇದೀಗ ಬಾಡಿಗೆ ಮನೆಯಲ್ಲಿರುವರಿಗೂ ಜಿ.ಎಸ್‌.ಟಿ. ಬರೆ ಎಳೆಯಲು ಕೇಂದ್ರ ಸರ್ಕಾರ ಸಿದ್ಧವಾಗಿದೆ ಎಂಬ ವದಂತಿ ಹಬ್ಬಿದೆ. ಮನೆ ಬಾಡಿಗೆ ಮೇಲೆ ಶೇ.18 ರಷ್ಟು ಜಿ.ಎಸ್‌.ಟಿ. ವಿಧಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗ್ತಿದೆ. ಇದು ಮಧ್ಯಮ ವರ್ಗದವರಲ್ಲಿ ಆತಂಕ ಮೂಡಿಸಿದೆ.

ಆದ್ರೆ ಮನೆ ಬಾಡಿಗೆಗೆ ಸರಕು ಮತ್ತು ಸೇವಾ ತೆರಿಗೆ ಹಾಕಲಾಗುತ್ತದೆ ಎಂಬ ವದಂತಿ ನಿಜವಲ್ಲ. ಮೂಲಗಳ ಪ್ರಕಾರ ಮನೆಯನ್ನು ವ್ಯಾಪಾರ ಘಟಕಕ್ಕೆ ಬಾಡಿಗೆಗೆ ನೀಡಿದಾಗ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಮನೆಯನ್ನು ವೈಯಕ್ತಿಕ ಬಳಕೆಗಾಗಿ ಖಾಸಗಿ ವ್ಯಕ್ತಿಗೆ ಬಾಡಿಗೆಗೆ ನೀಡಿದಾಗ GST ಇರುವುದಿಲ್ಲ. ಸಂಸ್ಥೆಯ ಮಾಲೀಕರು ಅಥವಾ ಪಾಲುದಾರರು ವೈಯಕ್ತಿಕ ಬಳಕೆಗಾಗಿ ನಿವಾಸವನ್ನು ಬಾಡಿಗೆಗೆ ಪಡೆದಿದ್ದರೂ ಸಹ ಯಾವುದೇ GST ಇಲ್ಲ.

ಭಾರತದಲ್ಲಿ ಆಸ್ತಿಯನ್ನು ಬಾಡಿಗೆಗೆ ಪಡೆಯುವ ಎಲ್ಲರೂ, ವೈಯಕ್ತಿಕ ಬಳಕೆಗಾಗಿರಬಹುದು ಅಥವಾ ಇಲ್ಲದೇ ಇರಬಹುದು, ಎಲ್ಲರಿಗೂ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದ್ರೆ ಇದು ಸತ್ಯಕ್ಕೆ ದೂರವಾಗಿದೆ. ಪ್ಯಾಕ್ ಮಾಡಿರುವ ಫುಡ್‌, ಗೃಹೋಪಯೋಗಿ ವಸ್ತುಗಳು, ಚಾಕು, ಕತ್ತರಿಗಳು ಮತ್ತು ಇತರ ದೈನಂದಿನ ಅವಶ್ಯಕತೆಗಳಂತಹ ಹಲವಾರು ಮೂಲಭೂತ ಸರಕುಗಳ ಮೇಲಿನ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ಕೇಂದ್ರದ ಈ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸುತ್ತಿವೆ. ಆದರೆ ಜಿ.ಎಸ್‌.ಟಿ. ಹೆಚ್ಚಳದಿಂದ ಜನಸಾಮಾನ್ಯರ ಜೇಬು ಖಾಲಿಯಾಗುವುದಿಲ್ಲ ಎಂದು ಕೇಂದ್ರ ಸಮರ್ಥಿಸಿಕೊಳ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...