ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರ ಶಾರಿಕ್, ಮತ್ತೊಬ್ಬರ ಆಧಾರ್ ಕಾರ್ಡ್ ಬಳಸಿ ಮೊಬೈಲ್ ಸಿಮ್ ಹಾಗೂ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದಿದ್ದ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮನೆ ಬಾಡಿಗೆ ನೀಡುವ ಸಾರ್ವಜನಿಕರಿಗೆ ಮಹತ್ವದ ಮಾಹಿತಿಗಳು ಇಲ್ಲಿವೆ.
ಮನೆ ಬಾಡಿಗೆ ನೀಡುವ ಮುನ್ನ ಮಾಲೀಕರು ಬಾಡಿಗೆದಾರರ ಪೂರ್ವಾಪರ ಅರಿತುಕೊಳ್ಳಿ ಮತ್ತು ದಾಖಲೆಗಳಾದ ಚುನಾವಣಾ ಗುರುತಿನ ಚೀಟಿ, ಆಧಾರ್ ಕಾರ್ಡುಗಳನ್ನು ತಪ್ಪದೇ ಪರಿಶೀಲಿಸಿ. ಜೊತೆಗೆ ಕಡ್ಡಾಯವಾಗಿ ಇವುಗಳ ಜೆರಾಕ್ಸ್ ಪ್ರತಿಗಳನ್ನು ತೆಗೆದಿಟ್ಟುಕೊಳ್ಳಿ.
ಹಾಗೆಯೇ ಮತ್ತೊಬ್ಬರ ಆಧಾರ್ ಕಾರ್ಡ್ ನೀಡುವ ಸಾಧ್ಯತೆಯೂ ಇರುವ ಕಾರಣ ಆಧಾರ್ ವೆಬ್ಸೈಟ್ ಗೆ ಹೋಗಿ ಬಾಡಿಗೆದಾರರು ನೀಡಿದ್ದ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ಸೆಂಡ್ ಒಟಿಪಿ ಕ್ಲಿಕ್ ಮಾಡಿದಾಗ ಆ ಆಧಾರ್ ಕಾರ್ಡಿಗೆ ನೋಂದಾಯಿಸಿದ ಮೊಬೈಲ್ ನಂಬರ್ ಗೆ ಓಟಿಪಿ ಸ್ವೀಕೃತವಾಗಿದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಎಲ್ಲಕ್ಕಿಂತ ಮುಖ್ಯವಾಗಿ ಬಾಡಿಗೆಗೆ ಬರುವ ವ್ಯಕ್ತಿಗಳು ಎಲ್ಲಿ ಹಾಗು ಏನು ಕೆಲಸ ಮಾಡುತ್ತಿದ್ದಾರೆ ಎಂಬುದರ ಮಾಹಿತಿಯ ಜೊತೆಗೆ ವಿಳಾಸವನ್ನು ತಪ್ಪದೇ ಪಡೆದುಕೊಳ್ಳಿ. ಜೊತೆಗೆ ಆಗಾಗ ಬಾಡಿಗೆದಾರರ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಿರಿ. ಅಲ್ಲದೆ ಯಾವುದೇ ಅಪರಿಚಿತ ಅನುಮಾನಾಸ್ಪದ ವ್ಯಕ್ತಿಗಳು ಮನೆ ಬಾಡಿಗೆ ಕೇಳಿಕೊಂಡು ಬಂದ ಸಂದರ್ಭದಲ್ಲಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.