ಮಧ್ಯ ಪ್ರದೇಶದ ಜಬಲ್ಪುರದ ಸೋಹನ್ ಲಾಲ್ ದ್ವಿವೇದಿ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಮನೆಯ ಛಾವಣಿ ಮೇಲೆ 40ಕ್ಕೂ ಹೆಚ್ಚು ವಿಧದ 2,500 ಬೋನ್ಸಾಯ್‌ಗಳನ್ನು ನೆಟ್ಟಿದ್ದಾರೆ.
ರಾಜ್ಯ ವಿದ್ಯುತ್ ನಿಗಮದ ನಿವೃತ್ತ ನೌಕರರಾದ ಸೋಹನ್ ಲಾಲ್ 250ಕ್ಕೂ ಹೆಚ್ಚು ಬೋನ್ಸಾಯ್ ಮರಗಳನ್ನು ಬೆಳೆಸಿದ್ದ ಮಹಿಳೆಯೊಬ್ಬರಿಂದ ಪ್ರೇರಣೆ ಪಡೆದಿದ್ದಾರೆ. 40 ವರ್ಷಗಳ ಹಿಂದೆ ಆಕೆಯ ಬಗ್ಗೆ ಸುದ್ದಿಪತ್ರಿಕೆಯೊಂದರಲ್ಲಿ ಬಂದಿದ್ದ ಆರ್ಟಿಕಲ್ ಓದಿ ತಾವೂ ಹೀಗೇ ಮಾಡಬೇಕೆಂದು ನಿರ್ಧರಿಸಿದ್ದಾರೆ ಲಾಲ್.
ಸೇಬುಗಳು, ಜಾಮೂನ್, ಪಿಯರ್, ಹುಣಸೇಹಣ್ಣು ಸೇರಿದಂತೆ ಅನೇಕ ವಿಧದ ಸಸಿಗಳನ್ನು ಸೋಹನ್ ಲಾಲ್ ಬೆಳೆಸಿದ್ದಾರೆ.
“ನಾನು ಮಧ್ಯ ಪ್ರದೇಶದ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಕ್ಕ ಸಂಬಳವನ್ನೆಲ್ಲಾ ಈ ಸಸಿಗಳ ಮೇಲೆ ವಿನಿಯೋಗಿಸಿದ್ದೇನೆ. ಸಸಿಗಳು ಹಾಗೂ ಪ್ರಕೃತಿಯಿಂದ ಜನರು ಅಂತರ ಕಾಯ್ದುಕೊಳ್ಳುತ್ತಿದ್ದ ವೇಳೆ ನಾನು ನನ್ನ ಮನೆಯ ಛಾವಣಿ ತುಂಬಾ ಹಸಿರು ಹೊದಿಕೆ ಹಾಸಿದ್ದೆ” ಎನ್ನುತ್ತಾರೆ ಲಾಲ್.