ಪ್ರತಿಯೊಬ್ಬರ ಮನೆಗೂ ಇರುವೆ ಬರುವುದು ಸಾಮಾನ್ಯ ಸಂಗತಿ. ಇರುವೆಗಳ ಸಾಲು ಒಮ್ಮೊಮ್ಮೆ ಮೇಲೆ ಹೊರಟ್ರೆ ಮತ್ತೊಮ್ಮೆ ಕೆಳಗೆ ಇಳಿಯುತ್ತಿರುತ್ತದೆ. ಕೆಲ ಇರುವೆಗಳಿಗೆ ಮನೆಯಲ್ಲಿ ಆಹಾರ ಸಿಕ್ಕಿದ್ರೆ ಮತ್ತೆ ಕೆಲವು ಎಲ್ಲಿಗೆ ಹೋಗ್ತಿವೆ ಎಂಬುದೇ ತಿಳಿಯುವುದಿಲ್ಲ. ಮನೆಗೆ ಬೇರೆ ಬೇರೆ ರೀತಿಯ ಇರುವೆಗಳು ಬರುತ್ತವೆ. ಈ ಇರುವೆಗಳ ಪ್ರತಿಯೊಂದು ವರ್ತನೆಯೂ ಭವಿಷ್ಯದ ಬಗ್ಗೆ ಸಂಕೇತ ನೀಡುತ್ತವೆ.
ಜ್ಯೋತಿಷ್ಯದ ಪ್ರಕಾರ, ಕಪ್ಪು ಇರುವೆಗಳು ಮನೆಗೆ ಬಂದ್ರೆ ಸಂತೋಷದ ಸಂಕೇತ. ಕಪ್ಪು ಇರುವೆಗಳಿಗೆ ಆಹಾರವನ್ನು ನೀಡುವುದು ಶುಭ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಅಕ್ಕಿ ತುಂಬಿದ ಪಾತ್ರೆಯಿಂದ ಇರುವೆಗಳು ಹೊರ ಬರುತ್ತಿದ್ದರೆ ಇದು ಶುಭ ಚಿಹ್ನೆ. ಕೆಲವೇ ದಿನಗಳಲ್ಲಿ ಹಣ ಹೆಚ್ಚಾಗುತ್ತದೆ.
ಮನೆಯಲ್ಲಿ ಕೆಂಪು ಇರುವೆಗಳು ಎಲ್ಲಿಯಾದರೂ ಕಂಡು ಬಂದರೆ ದೊಡ್ಡ ಸಮಸ್ಯೆ ಎದುರಾಗಲಿದೆ ಅರ್ಥ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಂಪು ಇರುವೆಗಳು ಭವಿಷ್ಯದ ತೊಂದರೆಗಳು, ವಿವಾದಗಳು, ಹಣ ಖರ್ಚಿನ ಚಿಹ್ನೆಗಳನ್ನು ನೀಡುತ್ತವೆ. ಮನೆಗೆ ಕೆಂಪು ಇರುವೆ ಬಂದ್ರೆ ಅಶುಭ. ಆದ್ರೆ ಬಾಯಿಯಲ್ಲಿ ಮೊಟ್ಟೆ ಹೊತ್ತು ಮನೆಯಿಂದ ಹೊರಗೆ ಹೋಗ್ತಿದ್ದರೆ ಶುಭ.
ಉತ್ತರ ದಿಕ್ಕಿನಿಂದ ಬರ್ತಿದ್ದರೆ ಶುಭ ಸಂಕೇತ. ದಕ್ಷಿಣ ದಿಕ್ಕಿನಿಂದ ಬರ್ತಿದ್ದರೆ ಸಾಮಾನ್ಯ ಫಲ ಪ್ರಾಪ್ತಿಯಾಗುತ್ತದೆ. ಪೂರ್ವ ದಿಕ್ಕಿನಿಂದ ಬರ್ತಿದ್ದರೆ ಅದನ್ನು ಅಶುಭ ಎನ್ನಲಾಗುತ್ತದೆ.