ಇತ್ತೀಚಿನ ದಿನಗಳಲ್ಲಿ ಮನೆಯ ಗೋಡೆಗಳಿಗೆ ಬಿಳಿಯ ಬಣ್ಣ ಹಚ್ಚುವುದೇ ಒಂದು ಟ್ರೇಂಡ್. ಈ ಬಣ್ಣ ಮನೆಗೆ ಒಂದು ಕ್ಲಾಸಿ ಲುಕ್ ಕೊಡುತ್ತೆ ಅನ್ನೋದು ಜನರ ನಂಬಿಕೆ. ಅಷ್ಟೇ ಅಲ್ಲ ಬಿಳಿಯ ಬಣ್ಣದ ಮೇಲೆ ಯಾವುದೇ ರೀತಿಯ ಚಿತ್ತಾಕರ್ಷಕ ಚಿತ್ರವನ್ನ ಬಿಡಿಸಿ, ಅದನ್ನ ಇನ್ನಷ್ಟು ಅಟ್ರ್ಯಾಕ್ಟಿವ್ ಮಾಡಬಹುದು. ಇದರ ಹೊರತಾಗಿ ಮನೆಗೆ ಬಿಳಿಯ ಬಣ್ಣ ಹಚ್ಚುವುದರಿಂದ ಇನ್ನೂ ಅನೇಕ ಲಾಭಗಳಿವೆ.
ನೀವು ನಂಬ್ತಿರೋ ಇಲ್ವೋ ಮನೆಯ ಕೋಣೆಗಳಿಗೆ ಬಿಳಿಯ ಬಣ್ಣ ಹಚ್ಚುವುದರಿಂದ ಆ ಕೋಣೆಗಳು ನೋಡಲು ವಿಶಾಲವಾಗಿರುವಂತೆ ಕಾಣಿಸುತ್ತೆ. ಅಷ್ಟೇ ಅಲ್ಲ ಬಿಳಿಯ ಬಣ್ಣದ ಗೋಡೆ ಒಂದು ಬಿಳಿಯ ಕಾಗದ ಇದ್ದ ಹಾಗೆ. ಇದರ ಮೇಲೆ ನೀವು ನಿಮ್ಮ ಕಲ್ಪನೆಯನ್ನ ಸರಳ ರೂಪದಲ್ಲಿ ಮೂಡಿಸಬಹುದು. ಬೇರೆ ಬಣ್ಣದಲ್ಲಿ ಇದು ಸ್ವಲ್ಪ ಕಷ್ಟಸಾಧ್ಯ.
ಬಿಳಿಯ ಬಣ್ಣ ಅನ್ನೋದು ಧನಾತ್ಮಕತೆ, ಶುಭ್ರತೆ ಮತ್ತು ಶಾಂತಿಯ ಸಂಕೇತ. ಇದರಿಂದ ಮನೆಯಲ್ಲಿ ಅಷ್ಟೆ ಅಲ್ಲ ಮನಸ್ಸಿನಲ್ಲಿಯೂ ನೆಮ್ಮದಿ ಆವರಿಸಿಕೊಂಡಿರುತ್ತೆ. ಬಿಳಿಯ ಬಣ್ಣಕ್ಕೆ ಹೊಳಪಿನ ಅಂಶ ಇರುವುದರಿಂದ ಮನೆಯೂ ಸಹ ಸದಾ ಬೆಳಕಿನಿಂದ ಕೂಡಿರುತ್ತೆ.
ವಾಯ್ಟ್ ಬ್ಲಾಕ್ಸ್ಗಳನ್ನ ಬಿಳಿಯ ಗೋಡೆಗಳ ಮೇಲೆ ಮೂಡಿಸಿ. ಇದೇ ಗೋಡೆಗಳಿಗೆ ಹೊಸದಾಗಿ ಒಂದು ರೂಪವನ್ನ ಸಹ ಕೊಡಬಹುದು. ಇದರಿಂದ ಮನೆಗೆ ಒಂದು ಹೈಕ್ಲಾಸ್ ಲುಕ್ ಕೊಡುತ್ತೆ. ಹೀಗೆ ಭಿನ್ನ ವಿಭಿನ್ನ ರೂಪವನ್ನ ನೀವು ಗೋಡೆಗಳ ಮೇಲೆ ನೀಡಬಹುದು. ಆದರೆ ಒಂದು ವಿಷಯ ನೆನಪಿರಲಿ, ಬಿಳಿಯ ಗೋಡೆ ಒಂದು ಚೂರೇ ಚೂರು ಕಲೆಯಾದರೂ ಅದು ಎದ್ದು ಕಾಣಿಸುತ್ತೆ. ಅದಕ್ಕಾಗಿ ಗೋಡೆಗಳ ಮೇಲೆ ಸ್ವಲ್ಪ ನಿಗಾ ಇರಲಿ.