ಮನೆಯಲ್ಲಿ ಕಲೆ, ಕೊಳಕು ಆಗುವುದು ಸಾಮಾನ್ಯ. ಎಷ್ಟೇ ಕ್ಲೀನ್ ಮಾಡಿದರೂ ಕಲೆಗಳು ಹೋಗಲ್ಲ ಎಂಬ ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ಇಲ್ಲಿ ನೋಡಿ. ಒಂದಷ್ಟು ಟಿಪ್ಸ್ ಗಳಿವೆ.
ಟೇಬಲ್ ಮೇಲೆ ಕಾಫಿ ಅಥವಾ ಟೀ ಕಲೆಗಳು ಅಂಟಿಕೊಂಡಿದ್ದರೆ ಅದಕ್ಕೆ ಸ್ವಲ್ಪ ಟಾಲ್ಕ್ಂ ಪೌಡರ್ ಅನ್ನು ಹಾಕಿ ಒದ್ದೆ ಬಟ್ಟೆಯಿಂದ ಒರೆಸಿಬಿಡಿ.
ಇನ್ನು ಬಟ್ಟೆಯಲ್ಲಿ ಯಾವುದಾದರೂ ಅಂಟಿನ ಪದಾರ್ಥದಿಂದ ಕಲೆಯಾಗಿದ್ದರೆ ಕಾರ್ನ್ ಸ್ಟಾರ್ಚ್ ನಿಂದ ಚೆನ್ನಾಗಿ ತಿಕ್ಕಿ. ನಂತರ ಅದನ್ನು ತೊಳೆಯಿರಿ.
ಇನ್ನು ನಿಮ್ಮ ಕನ್ನಡಿ, ಕಿಟಕಿ ಗಾಜುಗಳು ಹೊಳೆಯಬೇಕೆಂದರೆ ನ್ಯೂಸ್ ಪೇಪರ್ ನಿಂದ ಚೆನ್ನಾಗಿ ತಿಕ್ಕಿ, ಇದರಿಂದ ಗ್ಲಾಸ್ ಗಳು ಫಳಫಳನೆ ಹೊಳೆಯುತ್ತದೆ.
ಪಾತ್ರೆಯಲ್ಲಿ ಜಿಡ್ಡಿನಾಂಶವಿದ್ದರೆ ಅದಕ್ಕೆ ಸ್ವಲ್ಪ ಕಡಲೆಹಿಟ್ಟು ಹಾಕಿ ಚೆನ್ನಾಗಿ ತಿಕ್ಕಿ. ನಂತರ ಲಿಕ್ವಿಡ್ ಸೋಪಿನಿಂದ ತಿಕ್ಕಿ ಪಾತ್ರೆಯ ಜಿಡ್ಡಿನಾಂಶವೆಲ್ಲಾ ಹೋಗುತ್ತದೆ.
ಪುಸ್ತಕ ಇಟ್ಟಲ್ಲಿ ಕೆಲವೊಂದು ಹುಳುಗಳ ಕಾಟವಿರುತ್ತದೆ. ಹಾಗಾಗಿ ಬುಕ್ ಇಡುವ ಶೆಲ್ಪ್ ನಲ್ಲಿ ಬೇವಿನ ಎಲೆಗಳನ್ನು ಇಟ್ಟುಬಿಡಿ. ಇದರಿಂದ ಹುಳಗಳ ಕಾಟದಿಂದ ಮುಕ್ತಿ ಹೊಂದಬಹುದು.