ಮನೆಯ ಕೆಲಸ ಮಾಡಿಕೊಂಡು, ಗಂಡ, ಮಕ್ಕಳನ್ನು ನೋಡಿಕೊಂಡು ದಿನವಿಡೀ ಪುರುಸೊತ್ತು ಇಲ್ಲ ಎಂದು ಬೇಸರದಲ್ಲಿ ಇದ್ದೀರಾ…? ಈ ಪುರುಸೊತ್ತು, ಇಲ್ಲ, ಟೈಂ ಇಲ್ಲ ಎಂಬ ಮಾತು ಕೆಲವರ ಬಾಯಲ್ಲಿ ನೀವು ಕೇಳಿರುತ್ತಿರಿ. ಇದಕ್ಕೆ ಇಲ್ಲಿದೆ ನೋಡಿ ಒಂದಷ್ಟು ಟಿಪ್ಸ್.
ಬೆಳಿಗ್ಗೆ ಎದ್ದರೆ ರಾತ್ರಿ ಮಲಗುವ ತನಕವೂ ಈ ಮನೆ ಕೆಲಸ ಮುಗಿಯುವುದಿಲ್ಲ. ಕೆಲಸ ಮಾಡಿ ಮಾಡಿ ಬೇಜಾರು ಎಂದುಕೊಳ್ಳುತ್ತಿದ್ದೀರಾ…? ನಿಮ್ಮ ಸಮಯ ಎಲ್ಲಿ ಹೆಚ್ಚು ಕಳೆಯುತ್ತದೆ ಎಂಬುದನ್ನು ಮೊದಲು ಗಮನಿಸಿ.
ಬೆಳಿಗ್ಗೆ ತಿಂಡಿ ಏನು ಮಾಡಬೇಕು ಎಂಬುದನ್ನು ಹಿಂದಿನ ದಿನವೇ ಪ್ಲಾನ್ ಮಾಡಿಕೊಳ್ಳಿ. ಇಲ್ಲವೇ ವಾರವಿಡೀ ಏನು ತಿಂಡಿ, ಏನು ಅಡುಗೆ ಮಾಡಬೇಕು ಎಂಬುದನ್ನು ಮೊದಲು ಒಂದು ಪಟ್ಟಿ ತಯಾರಿಸಿಕೊಳ್ಳಿ. ಆಗ ದಿನಾ ಅಡುಗೆ, ತಿಂಡಿ ಕುರಿತು ಯೋಚಿಸುವುದು ತಪ್ಪುತ್ತದೆ.
ಇನ್ನು ಮಕ್ಕಳಿಗೆ ಕೂಡ ಸಣ್ಣ ಪುಟ್ಟ ಕೆಲಸ ಹೇಳಿಕೊಡಿ. ಅವರು ಅದನ್ನು ಖುಷಿಯಿಂದ ಮಾಡುವ ರೀತಿ ತಿಳಿಸಿ ಹೇಳಿ.
ಭಾನುವಾರದಂದು ಎಲ್ಲರೂ ಮನೆಯಲ್ಲಿ ಇರುವ ಕಾರಣ ಇಸ್ತ್ರಿ, ಮನೆ ಕ್ಲೀನ್ ಮಾಡುವ ಕೆಲಸವನ್ನು ಎಲ್ಲರೂ ಹಂಚಿಕೊಂಡು ಮಾಡುವ ಪ್ಲ್ಯಾನ್ ಹಾಕಿ. ಆಗ ನಿಮಗೊಬ್ಬರಿಗೆ ಒತ್ತಡ ಆಗುವುದು ತಪ್ಪುತ್ತದೆ. ಜತೆಗೆ ಕೆಲಸ ಕೂಡ ಬೇಗ ಮುಗಿಯುತ್ತದೆ.