ಗೃಹ ಕಾರ್ಮಿಕರಿಗೆ ಲಿಫ್ಟ್‌ಗಳನ್ನು ಪ್ರತ್ಯೇಕಿಸುವ ಚರ್ಚೆಯು ಸಾಮಾಜಿಕ ಮಾಧ್ಯಮದಲ್ಲಿ ಮರುಕಳಿಸುತ್ತಲೇ ಇದೆ. ಇದೀಗ ಪುಣೆ ಹೌಸಿಂಗ್ ಸೊಸೈಟಿಯಲ್ಲಿ ಮನೆ ಕೆಲಸಗಾರರಿಗೆ ಪ್ರತ್ಯೇಕ ಲಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಅಲ್ಲಿನ ಎಲ್ಲಾ ಸಾಕುಪ್ರಾಣಿಗಳು, ಗೃಹ ಸಹಾಯಕರು ಮತ್ತು ಸೇವಾ ಸಿಬ್ಬಂದಿಗೆ ಅವರಿಗೆ ನಿಯೋಜಿಸಲಾದ ಲಿಫ್ಟ್ ಅನ್ನು ಮಾತ್ರ ಬಳಸುವಂತೆ ಸೂಚನೆ ನೀಡಲಾಗಿದೆ. ಸೇವೆಗಳನ್ನು ಒದಗಿಸುವವರ ವಿರುದ್ಧ ತಾರತಮ್ಯ ಮಾಡುತ್ತಿರುವ ಸೂಚನಾ ಫಲಕ ವೈರಲ್ ಆಗಿದೆ.
ಸಂದೀಪ್ ಮನುಧಾನೆ ಎಂಬ ಟ್ವಿಟ್ಟರ್ ಬಳಕೆದಾರರು ಸೂಚನಾ ಫಲಕದ ಫೋಟೋ ಹಂಚಿಕೊಂಡಿದ್ದಾರೆ. ಲಿಫ್ಟ್ ಬಾಗಿಲಿನ ಹೊರಗೆ ಅಂಟಿಸಲಾಗಿರುವ ಸೂಚನೆಯಲ್ಲಿ, ಮನೆ ಸೇವಕರು ಲಿಫ್ಟ್ ಸಿ ಅಥವಾ ಡಿ ಮಾತ್ರ ಬಳಸಬೇಕು ಎಂದು ಬರೆಯಲಾಗಿದೆ. ಅದರ ಪಕ್ಕದಲ್ಲಿರುವ ಇನ್ನೊಂದು ಪೋಸ್ಟರ್‌ನಲ್ಲಿ, ಹಾಲು ಹಾಕುವವರು, ದಿನಪತ್ರಿಕೆ ಮತ್ತು ಕೊರಿಯರ್ ವಿತರಕರು, ಲಾಂಡ್ರಿ ಮಾಡುವವರು, ಕಾರ್ಮಿಕರು, ಪೇಂಟರ್‌ಗಳು ಮತ್ತು ಸಾಕುಪ್ರಾಣಿಗಳು ಲಿಫ್ಟ್ ‘ಡಿ’ ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ.
ಟ್ವೀಟ್ ಸಾಕಷ್ಟು ಗಮನ ಸೆಳೆದಿದ್ದರಿಂದ, ಇದು ಪುಣೆಯಲ್ಲಿ ಮಾತ್ರವಲ್ಲ, ದೇಶದಾದ್ಯಂತದ ನಗರಗಳಲ್ಲಿ ಸಾಕಷ್ಟು ಕಡೆ ಈ ರೀತಿ ಇದೆ ಎಂದು ಹಲವರು ಹೇಳಿದ್ದಾರೆ. ಇನ್ನು ಕೆಲವರು ಇದರಿಂದ ಸಿಟ್ಟಿಗೆದ್ದಿದ್ದು, ಸೂಚನೆಯನ್ನು ತೆಗೆದುಹಾಕಬೇಕು ಎಂದು ಹೇಳಿದ್ರೆ, ಇತರರು ಲಿಫ್ಟ್‌ಗಳ ಬದಲಿಗೆ ಮೆಟ್ಟಿಲುಗಳನ್ನು ಬಳಸಲು ಹೇಳಿದ್ರೆ ಮಾತ್ರ ತಾರತಮ್ಯವಾಗುತ್ತದೆ ಎಂದು ಸಮರ್ಥಿಸಿದ್ದಾರೆ.
ಮನೆಗೆಲಸದವರಿಗೆ ಸಾಮಾನ್ಯವಾಗಿ ಇಂತಹ ಸರ್ವಿಸ್ ಲಿಫ್ಟ್‌ಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ ಎಂದು ಹಲವರು ವಾದಿಸಿದ್ದಾರೆ. ಏಕೆಂದರೆ ಅವರು ಪ್ರತಿ ಮಹಡಿಯಲ್ಲಿ ನಿಲ್ಲಿಸುತ್ತಾರೆ. ಇದು ಹೆಚ್ಚಿನ ಮಹಡಿಗಳಲ್ಲಿ ವಾಸಿಸುವ ಜನರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತವೆ. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ನಿವಾಸಿಗಳು ಮತ್ತು ಇತರರ ನಡುವಿನ ಸಂಪರ್ಕವನ್ನು ಕಡಿಮೆ ಮಾಡಲು ಇಂತಹ ಪ್ರತ್ಯೇಕತೆಯು ಸರಿಯಿದೆ ಎಂದು ಇತರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಹೈದರಾಬಾದ್‌ನಿಂದ ವೈರಲ್ ಆಗಿದ್ದ ಇದೇ ರೀತಿಯ ಪೋಸ್ಟರ್, ನಿಯಮವನ್ನು ಅನುಸರಿಸಲು ವಿಫಲರಾದವರಿಗೆ ದಂಡ ವಿಧಿಸಲಾಗುವುದು ಎಂದು ಹೇಳಿತ್ತು.
https://twitter.com/sandeep_PT/status/1522112507522936832?ref_src=twsrc%5Etfw%7Ctwcamp%5Etweetembed%7Ctwterm%5E1522112507522936832%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fpune-housing-societys-notice-separating-lifts-for-house-helps-labourers-causes-uproar-5128093.html