ವಾಸ್ತುಶಾಸ್ತ್ರದ ಪ್ರಕಾರ ಪಶ್ಚಿಮ, ಪೂರ್ವ ಹಾಗೂ ಉತ್ತರದ ದಿಕ್ಕುಗಳಲ್ಲಿ ಕಿಟಕಿ ನಿರ್ಮಾಣ ಮಾಡುವುದು ಕಚೇರಿ ಹಾಗೂ ಮನೆಗಳಿಗೆ ಹೆಚ್ಚು ಶುಭಕರ ಎಂದು ಪರಿಗಣಿಸಲಾಗುತ್ತದೆ. ಉತ್ತರ ದಿಕ್ಕಿನಲ್ಲಿ ಕಿಟಕಿಯಿದ್ದರೆ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಇರುತ್ತದೆ. ಅಲ್ಲದೇ ಸಂಪತ್ತು ಕೂಡ ಹೆಚ್ಚುತ್ತದೆ . ಉತ್ತರ ದಿಕ್ಕನ್ನು ಹಣದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಈ ದಿಕ್ಕಿನಲ್ಲಿ ಕಿಟಕಿಗಳು ನಿರ್ಮಾಣ ಮಾಡುವುದು ಹೆಚ್ಚು ಶುಭಕರ.
ಇನ್ನು ಕಿಟಕಿಗಳು ತೆರೆದಿಡುವುದು ಹೆಚ್ಚು ಒಳ್ಳೆಯದು ಎಂದು ಹೇಳುತ್ತೆ ವಾಸ್ತುಶಾಸ್ತ್ರ. ಮನೆ ಅಥವಾ ಕಚೇರಿಗಳನ್ನು ನಿರ್ಮಿಸುವ ವೇಳೆಯಲ್ಲಿ ಉತ್ತರ ದಿಕ್ಕಿನಲ್ಲಿ ಕಿಟಕಿ ಇಡುವುದನ್ನು ಮರೆಯಬೇಡಿ. ವಾಸ್ತುಶಾಸ್ತ್ರದ ಪ್ರಕಾರ ಪಶ್ಚಿಮ ದಿಕ್ಕು ಯಮನ ದಿಕ್ಕಾಗಿದೆ. ಈ ದಿಕ್ಕಿನಲ್ಲಿ ಕಿಟಕಿ ನಿರ್ಮಿಸಿದರೆ ರೋಗ, ದುಃಖ ಹಾಗೂ ಸಂಕಟಗಳೇ ಹೆಚ್ಚಾಗುತ್ತೆ. ದಕ್ಷಿಣ ದಿಕ್ಕಿನಲ್ಲಿ ಕಿಟಕಿ ನಿರ್ಮಿಸಿದರೆ ಅನಗತ್ಯವಾಗಿ ಕಿಟಕಿ ಬಾಗಿಲನ್ನು ತೆರೆಯಬೇಡಿ. ಕಿಟಕಿಗಳಿಗೆ ದಪ್ಪವಾದ ಪರದೆಗಳನ್ನು ಹಾಕಿ.