ಮನೆಯ ಸಾಮಾನುಗಳನ್ನು ಸುಂದರವಾಗಿ ಜೋಡಿಸುವುದು ಒಂದು ಕಲೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸಾಮಾನುಗಳನ್ನು ಜೋಡಿಸುವುದು ಬುದ್ಧಿವಂತಿಕೆ. ವಸ್ತುಗಳನ್ನು ದಿಕ್ಕಿಗನುಗುಣವಾಗಿ ಮನೆಯಲ್ಲಿ ಜೋಡಿಸಿದ್ರೆ ಸುಖ, ಸಮೃದ್ಧಿ ಮನೆಯಲ್ಲಿ ನೆಲೆಸಿರುತ್ತದೆ.
ಮನೆಯಲ್ಲಿರುವ ದಾಖಲೆಗಳನ್ನು ಈಶಾನ್ಯಕ್ಕಭಿಮುಖವಾಗಿಡಬೇಕು. ಹಾಗೆ ಮಾಡಿದ್ರೆ ಕಾನೂನಿನ ಹೋರಾಟದಲ್ಲಿ ಯಶಸ್ಸು ನಿಮ್ಮದಾಗುತ್ತದೆ.
ಮನೆಯ ದೇವರ ಮನೆ ಆಗ್ನೇಯಕ್ಕಿರಬೇಕು. ಈ ದಿಕ್ಕಿನಲ್ಲಿ ದೇವರ ಮನೆಯಿದ್ದರೆ ಮಾನ-ಸಮ್ಮಾನದ ವೃದ್ಧಿಯಾಗುತ್ತದೆ.
ಕಪಾಟು ಉತ್ತರ ಅಥವಾ ದಕ್ಷಿಣ ದಿಕ್ಕಿನಲ್ಲಿದ್ದರೆ ಧನದ ವೃದ್ಧಿಯಾಗುತ್ತದೆ.
ಮನೆಯ ಉತ್ತರ ಅಥವಾ ಪೂರ್ವದಲ್ಲಿ ಯಾವುದೇ ಭಾರವಾದ ವಸ್ತುಗಳನ್ನಿಡಬೇಡಿ. ಈ ದಿಕ್ಕುಗಳು ಖಾಲಿಯಿದ್ದರೆ ಒಳ್ಳೆಯದು.
ವಾಯುವ್ಯ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
ಮನೆಯ ಪೂರ್ವ- ಉತ್ತರ ದಿಕ್ಕಿನಲ್ಲಿ ಗಡಿಯಾರ ಇಡುವುದು ಒಳ್ಳೆಯದಲ್ಲ.
ಮನೆಯ ಹಾಲ್ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿದ್ದರೆ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ.