ಮನೆಗೆ ಬೇಕಾದ ತರಕಾರಿಗಳನ್ನು ಮಾರ್ಕೆಟ್ ಗೆ ಹೋಗಿ ಕೊಂಡು ತರುತ್ತೇವೆ. ಆದರೆ ಕೆಲವೊಂದು ತರಕಾರಿಗಳನ್ನು ಬೆಳೆದುಕೊಂಡರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು, ದುಡ್ಡು ಕೂಡ ಉಳಿಯುತ್ತದೆ.
ನಿಮ್ಮ ಮನೆಯ ಎದುರುಗಡೆ ಜಾಗವಿಲ್ಲದಿದ್ದರೆ ಟೆರೆಸ್ ಮೇಲೆಯಂತೂ ಜಾಗ ಇರುತ್ತದೆ. ಅಲ್ಲಿಯೇ ಪಾಟ್ ಇಟ್ಟುಕೊಂಡು ನಿಮ್ಮ ದಿನನಿತ್ಯಕ್ಕೆ ಉಪಯೋಗವಾಗುವ ತರಕಾರಿಗಳನ್ನು ಬೆಳೆಸಿ.
ಕೊತ್ತಂಬರಿಸೊಪ್ಪು, ಪುದೀನಾ ಇವು ದಿನ ಬಳಸುವಂತದ್ದು.
ಹೊರಗಡೆಯಿಂದ ತರುವುದಕ್ಕಿಂತ ಇದನ್ನು ಮನೆಯಲ್ಲಿಯೇ ಬೆಳೆಸಬಹುದು. ಹಾಗೇ ಟೊಮೆಟೊ, ಬದನೆಕಾಯಿ, ಬೆಂಡೆಕಾಯಿಯಂತಹ ತರಕಾರಿಗಳನ್ನು ಕೂಡ ಸುಲಭವಾಗಿ ಬೆಳೆಸಬಹುದು. ಒಂದಷ್ಟು ಆರೈಕೆ ಮಾಡಿದರೆ ಈ ಗಿಡಗಳಿಂದ ಉತ್ತಮ ಫಸಲು ಪಡೆಯಬಹುದು.
ಇದರಿಂದ ಹಣ ಉಳಿತಾಯವಾಗುವುದರ ಜತೆಗೆ ನೀವೇ ಬೆಳೆದ ತರಕಾರಿಗಳನ್ನು ಬಳಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು ಹಾಗೂ ಖುಷಿ ಕೂಡ ಸಿಗುತ್ತದೆ.