ಶುಕ್ರ ಗ್ರಹ ಹಾಗೂ ಚಂದ್ರನ ಪೂಜೆಯಿಂದ ಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಬಹುದು. ಶುಕ್ರ ಹಾಗೂ ಚಂದ್ರನನ್ನು ಪ್ರಸನ್ನಗೊಳಿಸಲು ಬಯಸುವವರು ಮನೆಗೆ ಕಪ್ಪು ಹಾಗೂ ನೀಲಿ ಬಣ್ಣವನ್ನು ಹಚ್ಚಬಾರದು. ಮನೆಯ ದಕ್ಷಿಣ ಪೂರ್ವ ಭಾಗದಲ್ಲಿ ಅಡುಗೆ ಮನೆಯಿರಲಿ. ಅಡುಗೆ ಕೆಲಸ ಶುರುವಾಗುವ ಮೊದಲು ಮನೆಯ ಗೃಹಿಣಿಯರು ಈ ದಿಕ್ಕಿಗೆ ದೀಪವನ್ನು ಅವಶ್ಯವಾಗಿ ಹಚ್ಚಬೇಕು.
ಮನೆಯ ಗೃಹಿಣಿಯರು ಸ್ನಾನ ಮಾಡದೆ ಅಡುಗೆ ಮನೆಯಲ್ಲಿ ಯಾವುದೇ ಕೆಲಸವನ್ನು ಮಾಡಬಾರದು. ಅಡುಗೆ ಮನೆಯಲ್ಲಿ ತಾಯಿ ಅನ್ನಪೂರ್ಣೇಶ್ವರಿ ಫೋಟೋವನ್ನು ಅವಶ್ಯಕವಾಗಿ ಹಾಕಿ. ಕೆಲಸ ಶುರು ಮಾಡುವ ಮೊದಲು ತಾಯಿ ಅನ್ನಪೂರ್ಣೇಶ್ವರಿಯ ದರ್ಶನವನ್ನು ಅಗತ್ಯವಾಗಿ ಮಾಡಿ.
ಮನೆಯಲ್ಲಿ ಮಾಡುವ ಸಣ್ಣ ಪುಟ್ಟ ತಪ್ಪುಗಳು ಬಡತನವನ್ನು ಆಹ್ವಾನಿಸುತ್ತದೆ. ಹಾಗಾಗಿ ಸಣ್ಣಪುಟ್ಟ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕಾಗುತ್ತದೆ.
ಮನೆಯಲ್ಲಿ ಮಹಿಳೆಗೆ ಗೌರವ ಸಿಗದೆ ಹೋದಲ್ಲಿ ಶುಕ್ರ ಹಾಗೂ ಚಂದ್ರ ಮುನಿಸಿಕೊಳ್ತಾನೆ. ಇದು ದಾರಿದ್ರ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಆಗ್ನೇಯ ಮೂಲೆಯಲ್ಲಿ ನೀರಿನ ಕೊಳವೆ ಅಥವಾ ನೀರು ಇಡುವುದ್ರಿಂದ ವಾಸ್ತು ದೋಷ ನಿರ್ಮಾಣವಾಗುತ್ತದೆ.
ಮನೆ ಮಹಿಳೆ ರಾತ್ರಿ ತುಂಬಾ ಹೊತ್ತು ಎದ್ದಿರಬಾರದು. ಹಾಗೆ ಬೆಳಿಗ್ಗೆ ತುಂಬಾ ಸಮಯ ಮಲಗಿರಬಾರದು. ಇದು ಶನಿ ಹಾಗೂ ಚಂದ್ರನ ಮುನಿಸಿಗೆ ಕಾರಣವಾಗುತ್ತದೆ.
ಮನೆಯಲ್ಲಿ ನಡೆಯುವ ಸಣ್ಣ ಸಣ್ಣ ಗಲಾಟೆ ಆರ್ಥಿಕ ಪರಿಸ್ಥಿತಿ ಹದಗೆಡಲು ಕಾರಣವಾಗುತ್ತದೆ.
ಮನೆಯ ಅಲ್ಲಲ್ಲಿ ಸಣ್ಣಪುಟ್ಟ ಕಸವನ್ನು ಹಾಕುವುದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆ ಸದಾ ಸ್ವಚ್ಛವಾಗಿರಬೇಕು.
ಪತ್ನಿಗೆ ಅವಮಾನ ಮಾಡಿದ್ರೆ ತಾಯಿ ಲಕ್ಷ್ಮಿ ಮುನಿಸಿಕೊಳ್ತಾಳೆ.