ಗಿಡ, ಮರಗಳಲ್ಲಿಯೂ ಕೂಡ ದೇವಾನುದೇವತೆಗಳು ನೆಲೆಸಿರುತ್ತಾರೆ ಎಂಬ ನಂಬಿಕೆ ಹಿಂದೂಧರ್ಮದಲ್ಲಿದೆ. ಹಾಗಾಗಿ ನಿಮ್ಮ ಮನೆಯಲ್ಲಿರುವ ಸಂಕಷ್ಟಗಳು ಕಳೆದು ಮನೆಯಲ್ಲಿ ಸುಖ, ಶಾಂತಿ, ಸಂಪತ್ತು ನೆಲೆಸಲು ಈ ಗಿಡವನ್ನು ಮನೆಯಲ್ಲಿ ಬೆಳೆಸಿ.
ಸಾಮಾನ್ಯವಾಗಿ ಎಲ್ಲಾ ಗಿಡಗಳು ಬೆಳೆಯಲು ನೀರು ಬೇಕು. ಆದರೆ ನೀರಿಲ್ಲದೇ ಬೆಳೆಯುವ ಗಿಡವೆಂದರೆ ಅದು ಲೋಳೆ ಗಿಡ( ಅಲೋವೆರಾ ಗಿಡ). ಈ ಗಿಡವನ್ನು ಮನೆಯಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ನೆಟ್ಟರೆ ನಿಮ್ಮ ಹಲವು ಸಮಸ್ಯೆಗಳು, ದಾರಿದ್ರ್ಯ ದೋಷಗಳು ನಿವಾರಣೆಯಾಗುತ್ತದೆ. ಈ ಲೋಳೆ ಗಿಡವನ್ನು ನಿಮ್ಮ ಮನೆಯ ಈಶಾನ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಬೆಳೆಸಿ. ಇದರಿಂದ ಲಕ್ಷ್ಮಿ ದೇವಿ ಮನೆಗೆ ಬಂದು ನೆಲೆಸುತ್ತಾಳೆ. ಆದರೆ ಆಗ್ನೇಯ ದಿಕ್ಕಿನಲ್ಲಿ ಈ ಗಿಡವನ್ನು ಬೆಳೆಸಬೇಡಿ. ಇದರಿಂದ ಮನೆಗೆ ಸಂಕಷ್ಟಗಳು ಬಂದೊದಗುತ್ತದೆ.
ʼಅದೃಷ್ಟʼ ತರುವ ಅಲೋವೇರಾ….!
ಹಾಗೇ ಇದನ್ನು ಮನೆಯ ಮುಂಭಾಗದಲ್ಲಿ ಬೇರುಗಳನ್ನು ಮೇಲ್ಮುಖ ಮಾಡಿ ನೇತು ಹಾಕುವುದರಿಂದ ಶನಿದೋಷ ನಿವಾರಣೆಯಾಗುತ್ತದೆ. ಹಾಗೇ ಶುಕ್ರವಾರದಂದು ಸಂಜೆ ಪ್ರದೋಷ ಕಾಲದಲ್ಲಿ ಲಕ್ಷ್ಮಿದೇವಿಗೆ ಲೋಳಸರದಿಂದ ನೈವೇದ್ಯ ಮಾಡಿದರೆ ಸಕಲ ದಾರಿದ್ರ್ಯ, ದೋಷಗಳು ಕಳೆದು ಏಳಿಗೆಯಾಗುತ್ತದೆ.