ಜ್ಯೋತಿಷ್ಯದಲ್ಲಿ ವಾಸ್ತು ಶಾಸ್ತ್ರಕ್ಕೂ ವಿಶೇಷ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಮನೆಯಲ್ಲಿ ಹಾಕುವ ಫೋಟೋ, ಕ್ಯಾಲೆಂಡರ್ ಬಗ್ಗೆಯೂ ವಿವರಣೆಯಿದೆ. ಮನೆಯಲ್ಲಿ ಸರಿಯಾದ ದಿಕ್ಕಿನಲ್ಲಿ ಸರಿಯಾದ ಫೋಟೋ ಹಾಕಿದ್ರೆ ಮಾತ್ರ ಯಶಸ್ಸು ಪ್ರಾಪ್ತಿಯಾಗುತ್ತದೆ. ಇಲ್ಲವೆಂದ್ರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಸದಸ್ಯರ ಫೋಟೋವನ್ನು ಉತ್ತರ ದಿಕ್ಕು, ಪೂರ್ವ ದಿಕ್ಕು ಅಥವಾ ಉತ್ತರ – ಪೂರ್ವ ದಿಕ್ಕಿಗೆ ಹಾಕಬೇಕು. ಕುಟುಂಬಸ್ಥರ ಫೋಟೋ ಹಾಕಲು ಈ ದಿಕ್ಕು ಸರಿ.
ಬೇರೆ ಯಾವುದೇ ದಿಕ್ಕಿನಲ್ಲಿ ಕುಟುಂಬಸ್ಥರ ಫೋಟೋ ಇರಬಾರದು. ಭಗವಂತನ ಉಗ್ರ ರೂಪ ಅಥವಾ ಯುದ್ಧದ ಫೋಟೋಗಳನ್ನೂ ಮನೆಯಲ್ಲಿ ಹಾಕಬಾರದು.
ಮನೆಯ ಯಾವುದೇ ಬಾಗಿಲಿನ ಹಿಂದೆ ಅಥವಾ ಮುಂದೆ ಕ್ಯಾಲೆಂಡರ್ ಹಾಕಬೇಡಿ. ಇದು ಕುಟುಂಬಸ್ಥರ ಆಯಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಕೆಲವರು ಹೊಸ ಕ್ಯಾಲೆಂಡರ್ ಹಾಕ್ತಾರೆ. ಆದ್ರೆ ಹಳೆ ಕ್ಯಾಲೆಂಡರ್ ಮೇಲೆ ಹೊಸ ಕ್ಯಾಲೆಂಡರ್ ಹಾಕ್ತಾರೆ. ಕ್ಯಾಲೆಂಡರ್ ಮೇಲೆ ಭಗವಂತನ ಫೋಟೋ ಇರುವುದು ಇದಕ್ಕೆ ಕಾರಣ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ ಇದು ಸರಿಯಲ್ಲ.