ವಾಸ್ತು ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿಕ್ಕೂ ನಿರ್ದಿಷ್ಟವಾದ ಬಣ್ಣಕ್ಕೆ ಸಂಬಂಧಿಸಿದೆ. ಆದ್ದರಿಂದ ವಾಸ್ತು ದೋಷ ನಿವಾರಿಸಲು ಮನೆಯಲ್ಲಿ ಆಯಾ ದಿಕ್ಕಿನಲ್ಲಿ ಅದಕ್ಕೆ ಸಂಬಂಧಿಸಿದ ಬಣ್ಣದ ವಸ್ತುಗಳನ್ನು ಜೋಡಿಸಿ. ಹಾಗೆ ಮನೆಯ ಕಿಟಕಿ ಬಾಗಿಲಿಗೆ ದಿಕ್ಕಿಗೆ ಸರಿಯಾದ ಬಣ್ಣದ ಪರದೆಯನ್ನು ಬಳಸಿ.
ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ದಿಕ್ಕು ಹಸಿರು ಬಣ್ಣಕ್ಕೆ ಸಂಬಂಧಿಸಿದ್ದರಿಂದ ಪೂರ್ವ ದಿಕ್ಕಿನ ಕಿಟಕಿ, ಬಾಗಿಲಿಗೆ ಹಸಿರು ಬಣ್ಣದ ಪರದೆ ಹಾಕಿ. ಪಶ್ಚಿಮ ದಿಕ್ಕು ಬಿಳಿ ಬಣ್ಣಕ್ಕೆ ಸಂಬಂಧಿಸಿದ್ದರಿಂದ ಈ ದಿಕ್ಕಿನ ಕಿಟಕಿ, ಬಾಗಿಲಿಗೆ ಬಿಳಿ ಬಣ್ಣದ ಪರದೆ ಹಾಕಿ. ಹಾಗೇ ದಕ್ಷಿಣ ದಿಕ್ಕಿನಲ್ಲಿ ಕೆಂಪು ಬಣ್ಣದ ಪರದೆ ಹಾಗೂ ಉತ್ತರ ದಿಕ್ಕಿನಲ್ಲಿ ಕಪ್ಪು ಬಣ್ಣದ ಪರದೆಗಳನ್ನು ಹಾಕಿ.
ಹೀಗೆ ಮಾಡುವುದರಿಂದ ನಿಮ್ಮ ಮನೆಯ ಸದಸ್ಯರಿಗೆ ಆರೋಗ್ಯ ಸಮಸ್ಯೆ ಕಾಡುವುದಿಲ್ಲ. ಮನೆಯವರಿಗೆ ನೀರಿನಿಂದಾಗುವ ಅಪಾಯ ತಪ್ಪುತ್ತದೆ. ಮನೆಯವರ ಭಯ ದೂರವಾಗುತ್ತದೆ. ಮನೆಯ ಗಂಡು ಮಕ್ಕಳಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.