alex Certify ಮನೆಯ ಈ ಸಮಸ್ಯೆಗೆ ಕಾರಣವಾಗ್ತಾರೆ ʼಪೂರ್ವಜರುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಈ ಸಮಸ್ಯೆಗೆ ಕಾರಣವಾಗ್ತಾರೆ ʼಪೂರ್ವಜರುʼ

ಮನೆಯಲ್ಲಿ ಎಲ್ಲ ಸರಿಯಾಗಿದ್ರೂ ಕೆಲವು ಸಮಸ್ಯೆಗಳು ಮಾತ್ರ ಬಿಡುವುದಿಲ್ಲ. ಪ್ರಾರ್ಥನೆ, ಪೂಜೆ ನಡೆಸಿದ್ರೂ ಕಿರಿಕಿರಿ ತಪ್ಪುವುದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದ್ರಲ್ಲಿ ಪೂರ್ವಜರ ಕೋಪ ಕೂಡ ಒಂದು. ಪೂರ್ವಜರು ಕೋಪಗೊಂಡಾಗ ಶಾಂತಿ, ಸುಖ ಕಡಿಮೆಯಾಗುತ್ತದೆ. ಸಮಸ್ಯೆ ಮನೆ ತುಂಬಿಕೊಳ್ಳುತ್ತದೆ.

ಪಿತೃಪಕ್ಷದಲ್ಲಿ ಪೂರ್ವಜರ ಶ್ರಾದ್ಧ ಮಾಡಬೇಕು. ಪದ್ಧತಿಯಂತೆ ಪೂರ್ವಜರನ್ನು ಆಹ್ವಾನ ಮಾಡಿ ಪೂಜೆ ಮಾಡಬೇಕು. ಹಾಗೆ ಮಾಡದೆ ಹೋದಲ್ಲಿ ಪೂರ್ವಜರು ಕೋಪಗೊಳ್ತಾರೆ. ಆರ್ಥಿಕ ಸಮಸ್ಯೆ ಮನೆಯಲ್ಲಿ ಕಾಡಲು ಶುರುವಾಗುತ್ತದೆ. ಕುಟುಂಬಸ್ಥರ ಮಧ್ಯೆ ಗಲಾಟೆ, ಜಗಳವಾಗ್ತಿರುತ್ತದೆ.

ವಂಶವೃದ್ಧಿಯಾಗದೆ ಇರುವುದು, ಕಾನೂನು ಕೆಲಸದಲ್ಲಿ ವಿಘ್ನ, ಮಗಳ ಮದುವೆಯಲ್ಲಿ ವಿಳಂಬ, ಆರೋಗ್ಯ ಸಮಸ್ಯೆ ಎಲ್ಲದಕ್ಕೂ ಪಿತೃದೋಷ ಕಾರಣವಾಗುತ್ತದೆ. ಹಾಗಾಗಿ ಇಂಥ ಸಮಸ್ಯೆಯಿರುವವರು ಜಾತಕ ತೋರಿಸಿ ಪರಿಹಾರ ಕಂಡುಕೊಳ್ಳಬೇಕು. ಪಿತೃಪಕ್ಷದಲ್ಲಿ ಪೂರ್ವಜರ ಶ್ರಾದ್ಧ ಮಾಡಬೇಕು.

ಪಿತೃದೋಷ ಜಾತಕ ನೋಡಿದಾಗ ತಿಳಿಯುತ್ತದೆ. ಸೂರ್ಯ ಹಾಗೂ ಚಂದ್ರ ಗ್ರಹಗಳ ಸ್ಥಾನ ನೋಡಿ ಇದನ್ನು ಕಂಡು ಹಿಡಿಯಲಾಗುತ್ತದೆ. ಜಾತಕದಲ್ಲಿ ಪಿತೃದೋಷವಿದ್ದವರು ಸೂಕ್ತ ಪರಿಹಾರ ಮಾಡಿಕೊಳ್ಳದೆ ಹೋದಲ್ಲಿ ಸಮಸ್ಯೆ ಮುಂದುವರೆಯುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...