ವಾಸ್ತು ಶಾಸ್ತ್ರದಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರವಿದೆ. ಅದನ್ನು ಅನುಸರಿಸಿದರೆ ಪ್ರಯೋಜನಗಳಿವೆ ಅದೇ ರೀತಿ ವಾಸ್ತು ಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸಿದರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ನಾವು ಪ್ರತಿದಿನ ಊಟ-ಉಪಹಾರ ಸೇವನೆ ಸಂದರ್ಭದಲ್ಲಿ ಕೂಡ ಕೆಲವೊಂದು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.
ಇದರಲ್ಲಿ ವಾಸ್ತು ನಿಯಮ ಪಾಲಿಸದಿದ್ದರೆ ಬಡತನವನ್ನು ಸಹ ಎದುರಿಸಬೇಕಾಗಬಹುದು. ವಾಸ್ತು ಶಾಸ್ತ್ರದಲ್ಲಿ ಆಹಾರ ಸೇವನೆಗೆ ವಿವರಿಸಿರುವ ನಿಯಮಗಳನ್ನು ಅನುಸರಿಸಿದರೆ ಮನೆಗೆ ಧನಾತ್ಮಕ ಶಕ್ತಿಯ ಆಗಮನವಾಗುತ್ತದೆ. ಆರೋಗ್ಯದಲ್ಲಿ ಏರುಪೇರಾಗುವುದಿಲ್ಲ.
ಕುಟುಂಬದೊಂದಿಗೆ ಒಟ್ಟಿಗೆ ಊಟ ಮಾಡಿ…
ಧರ್ಮಗ್ರಂಥಗಳ ಪ್ರಕಾರ ಆಹಾರವನ್ನು ಎಂದಿಗೂ ಅವಮಾನಿಸಬಾರದು. ಯಾವುದನ್ನು ಪಡೆದರೂ ದೇವರಿಗೆ ಕೃತಜ್ಞತೆ ಸಲ್ಲಿಸುವ ಮೂಲಕ ಸ್ವೀಕರಿಸಬೇಕು. ಮೊದಲನೆಯದಾಗಿ ಒಬ್ಬ ವ್ಯಕ್ತಿಯು ತನ್ನ ಇಡೀ ಕುಟುಂಬದೊಂದಿಗೆ ಕುಳಿತುಕೊಂಡು ಊಟ, ಉಪಹಾರ ಸೇವಿಸಬೇಕು. ಇದು ಕುಟುಂಬ ಸದಸ್ಯರಲ್ಲಿ ಒಗ್ಗಟ್ಟು ಮತ್ತು ಪ್ರೀತಿಯನ್ನು ಕಾಪಾಡುತ್ತದೆ.
ಸರಿಯಾದ ದಿಕ್ಕಿನಲ್ಲಿ ಕುಳಿತು ಆಹಾರ ಸೇವನೆ – ಆಹಾರವನ್ನು ಸೇವಿಸಲು ಸರಿಯಾದ ದಿಕ್ಕನ್ನು ಸಹ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ತಿಳಿಸಲಾಗಿದೆ. ಒಬ್ಬ ವ್ಯಕ್ತಿಯು ಆಹಾರ ಸೇವಿಸುವಾಗ ಮನೆಯ ಪೂರ್ವ ಮತ್ತು ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು. ಇದು ವ್ಯಕ್ತಿಯೊಳಗಿನ ನಕಾರಾತ್ಮಕ ಭಾವನೆಯನ್ನು ಕಡಿಮೆ ಮಾಡುತ್ತದೆ.
ಆಹಾರವನ್ನು ವ್ಯರ್ಥ ಮಾಡಬೇಡಿ – ವಾಸ್ತು ಶಾಸ್ತ್ರದ ಪ್ರಕಾರ ಆಹಾರವನ್ನು ವ್ಯರ್ಥ ಮಾಡುವುದನ್ನು ಪಾಪಕ್ಕೆ ಸಮಾನವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಆಹಾರವನ್ನು ಎಂದಿಗೂ ಎಸೆಯಬೇಡಿ. ಬದಲಿಗೆ ಅಗತ್ಯವಿರುವಷ್ಟೇ ಊಟವನ್ನು ತಟ್ಟೆಯಲ್ಲಿ ಬಡಿಸಿಕೊಳ್ಳಿ.
ತಟ್ಟೆಯಲ್ಲಿ ಕೈ ತೊಳೆಯಬೇಡಿ – ಊಟ ಮಾಡಿದ ನಂತರ ಅಪ್ಪಿ ತಪ್ಪಿಯೂ ತಟ್ಟೆಯಲ್ಲಿ ಕೈ ತೊಳೆಯಬಾರದು. ಇದನ್ನು ಮಾಡುವುದರಿಂದ ಬಡತನ ಬರಬಹುದು.
ಆಹಾರವನ್ನು ಅವಮಾನಿಸಬೇಡಿ – ಆಹಾರ ಸೇವಿಸುವಾಗ ಎಂದಿಗೂ ಶೌಚಾಲಯಕ್ಕೆ ಹೋಗಬೇಡಿ. ವಾಸ್ತು ಶಾಸ್ತ್ರದ ಪ್ರಕಾರ ಇದು ಆಹಾರಕ್ಕೆ ಮಾಡುವ ಅವಮಾನ ಎಂದು ಪರಿಗಣಿಸಲಾಗುತ್ತದೆ.