alex Certify ಮನೆಯ ಈ ಜಾಗದಲ್ಲಿ ಲವಂಗ ಅಡಗಿಸಿಟ್ಟರೆ ಖುಲಾಯಿಸಲಿದೆ ನಿಮಗೆ ʼಅದೃಷ್ಟʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯ ಈ ಜಾಗದಲ್ಲಿ ಲವಂಗ ಅಡಗಿಸಿಟ್ಟರೆ ಖುಲಾಯಿಸಲಿದೆ ನಿಮಗೆ ʼಅದೃಷ್ಟʼ

ಅಡುಗೆ ಮನೆಯಲ್ಲಿರುವ ಲವಂಗಕ್ಕೆ ನಿಮ್ಮ ಅದೃಷ್ಟ ಬದಲಿಸುವ ಶಕ್ತಿಯಿದೆ. ಜ್ಯೋತಿಷ್ಯದಲ್ಲಿ ಲವಂಗದ ಬಗ್ಗೆ ಹೇಳಿರುವ ಉಪಾಯ ಕೆಲವೇ ದಿನಗಳಲ್ಲಿ ನಿಮ್ಮನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಹಾಗೆ ಲವಂಗದಿಂದ ಮಾಡುವ ಕೆಲ ಉಪಾಯಗಳು ನಿಮ್ಮ ಎಲ್ಲ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಮೊದಲು ಎರಡು ಲವಂಗವನ್ನು ತೆಗೆದುಕೊಳ್ಳಿ. ಕೆಂಪು ಬಟ್ಟೆಯನ್ನು ತೆಗೆದುಕೊಳ್ಳಿ. ಮೊದಲು ದೇವರಿಗೆ ತುಪ್ಪದ ದೀಪ ಹಚ್ಚಿ. ನಂತ್ರ ಲವಂಗವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿಡಿ. ಲವಂಗ ಸುರಕ್ಷಿತವಾಗಿ ಇರುವಂತೆ ಸುರಕ್ಷಿತ ಸ್ಥಳದಲ್ಲಿ ಇಡಿ. ಇದನ್ನು ಯಾರಿಗೂ ಹೇಳಬೇಡಿ. ಈ ಕೆಲಸ ಮಾಡುವಾಗ ಮಾತನಾಡಬೇಡಿ. ನಂತ್ರ ಪರಿಣಾಮ ನೋಡಿ. ಐದೇ ದಿನಗಳಲ್ಲಿ ಹಣ ಬರಲು ಶುರುವಾಗುತ್ತದೆ.

ಇದಲ್ಲದೆ ಪ್ರತಿ ದಿನ ದೇವರಿಗೆ ಆರತಿ ಬೆಳಗುವ ವೇಳೆ ದೀಪಕ್ಕೆ ಒಂದು ಲವಂಗ ಹಾಕಿ ಬೆಳಗಿ. ಇದು ನಿಮ್ಮ ಎಲ್ಲ ಸಮಸ್ಯೆಯನ್ನು ದೂರ ಮಾಡುತ್ತದೆ.

ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಎಲ್ಲ ಸಮಸ್ಯೆಗೆ ಕಾರಣವಾಗುತ್ತದೆ. ಇದನ್ನು ಲವಂಗ ದೂರ ಮಾಡಬಲ್ಲದು. ಶನಿವಾರ ಅಥವಾ ಭಾನುವಾರ ಸಂಜೆ ಐದು ಲವಂಗ, 3 ಕರ್ಪೂರ ಹಾಗೂ 3 ಏಲಕ್ಕಿಯನ್ನು ದೀಪಕ್ಕೆ ಹಾಕಿ. ಅದ್ರ ಹೊಗೆಯನ್ನು ಮನೆಯ ಎಲ್ಲ ಕೋಣೆಗೆ ತೋರಿಸಿ. ನಂತ್ರ ಅದನ್ನು ಮುಖ್ಯ ದ್ವಾರದ ಬಳಿಯಿಡಿ. ಇದ್ರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.

ಯಾವುದಾದ್ರೂ ಮುಖ್ಯ ಕೆಲಸಕ್ಕೆ ಹೋಗುತ್ತಿದ್ದರೆ ಮನೆಯಿಂದ ಹೊರಗೆ ಹೋಗುವ ಮೊದಲು ಲವಂಗವನ್ನು ಬಾಯಲ್ಲಿ ಹಾಕಿಕೊಳ್ಳಿ. ನಂತ್ರ ಅಗೆದು ಅದನ್ನು ತುಪ್ಪಿ. ಇಷ್ಟ ದೇವತೆಯನ್ನು ನೆನೆಯುತ್ತ ಕೆಲಸ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...