
ಒತ್ತಡ, ಖಿನ್ನತೆ ಕೇವಲ ವಯಸ್ಕರಲ್ಲಿ ಮಾತ್ರವಲ್ಲ ಸಣ್ಣ ಮಕ್ಕಳಲ್ಲೂ ಇತ್ತೀಚಿಗೆ ಕಾಡಲು ಶುರುವಾಗಿದೆ. ಒತ್ತಡ ಹೆಚ್ಚಾದಂತೆ ಖಿನ್ನತೆ ಕಾಡಲು ಶುರುವಾಗುತ್ತದೆ. ಸಣ್ಣ ಪುಟ್ಟ ವಿಚಾರಗಳಿಗೂ ಜನರು ಒತ್ತಡ, ಖಿನ್ನತೆ ಅನುಭವಿಸುತ್ತಿದ್ದಾರೆ.
ವ್ಯಕ್ತಿಯೊಳಗಿರುವ ನಕಾರಾತ್ಮಕ ಶಕ್ತಿ ಹೆಚ್ಚಾದಂತೆ ಖಿನ್ನತೆ ಹೆಚ್ಚಾಗುತ್ತದೆ. ಇದಕ್ಕೆ ಮನೆಯಲ್ಲಿರುವ ವಾಸ್ತು ದೋಷವೂ ಕಾರಣ. ವಾಸ್ತು ದೋಷದಿಂದ ಖಿನ್ನತೆ ಕಾಡಲು ಶುರುವಾಗುತ್ತದೆ.
ವಾಸ್ತು ಶಾಸ್ತ್ರ ತಜ್ಞರ ಪ್ರಕಾರ, ಮನೆಯ ಪಶ್ಚಿಮ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ ವ್ಯಕ್ತಿ ಒತ್ತಡ ಮತ್ತು ಖಿನ್ನತೆಗೆ ಒಳಗಾಗ್ತಾನೆ. ಖಿನ್ನತೆಗೆ ಒಳಗಾಗಿರುವ ಅನುಭವವಾದ್ರೆ ಮನೆಯ ಪಶ್ಚಿಮ ದಿಕ್ಕನ್ನು ವಾಸ್ತುವಿಗನುಗುಣವಾಗಿಡಿ. ಅನೇಕ ಸಮಯ ಅಲ್ಲಿ ಕಳೆಯದಂತೆ ನೋಡಿಕೊಳ್ಳಿ. ಪಶ್ಚಿಮ ದಿಕ್ಕಿಗೆ ಮಲಗುವುದು ಒಳ್ಳೆಯದಲ್ಲ. ಹಾಗಾಗಿ ಪಶ್ಚಿಮ ದಿಕ್ಕಿಗೆ ಮಲಗುವ ಕೋಣೆ ಇರದಂತೆ ನೋಡಿಕೊಳ್ಳಿ. ಪಶ್ಚಿಮ ದಿಕ್ಕಿನಲ್ಲಿ ಮೆಟ್ಟಿಲು, ಶೌಚಾಲಯ ಇರುವುದು ಒಳ್ಳೆಯದು.
ಒತ್ತಡ ಹಾಗೂ ಖಿನ್ನತೆಗೊಳಗಾದ ವ್ಯಕ್ತಿ ಉತ್ತರ ಅಥವಾ ಪಶ್ಚಿಮ ದಿಕ್ಕಿಗೆ ತಲೆಯಿಟ್ಟು ಮಲಗಬೇಡಿ. ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ತಲೆಯಿಟ್ಟು ಮಲಗಬೇಕು.
ಮನೆಯಲ್ಲಿ ಹಾಳಾದ, ಒಡೆದ ಯಾವುದೇ ವಸ್ತುಗಳನ್ನು ಇಡಬೇಡಿ. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ.
ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಿದ್ದರೆ ಸಂಜೆ ಸಮಯದಲ್ಲಿ ಅಗರಬತ್ತಿಯನ್ನು ಹಚ್ಚಿ. ಇದ್ರ ಸುಗಂಧ ಮನೆಯನ್ನು ಹರಡುವುದ್ರಿಂದ ಮನೆ ಜೊತೆ ಮನಸ್ಸು ಶಾಂತಗೊಳ್ಳುತ್ತದೆ. ಹೊಸ ಉತ್ಸಾಹ ಮನೆ ಮಾಡುತ್ತದೆ.