ನಮ್ಮ ಸುತ್ತಮುತ್ತ ಅನೇಕ ಪಕ್ಷಿಗಳನ್ನು ನಾವು ನೋಡ್ತೇವೆ. ಪಕ್ಷಿಗಳ ಮಹತ್ವ ಎಲ್ಲರಿಗೂ ಗೊತ್ತು. ಪಕ್ಷಿಗಳಿಗೂ ಧರ್ಮಕ್ಕೂ ಮಹತ್ವದ ಸಂಬಂಧವಿದೆ. ಹಿಂದೂ ಧರ್ಮದಲ್ಲಿ ಪಕ್ಷಿಗಳು ಹಾಗೂ ಪ್ರಾಣಿಗಳು ದೇವಾನುದೇವತೆಗಳ ವಾಹನಗಳಾಗಿವೆ. ದೇವರ ಪೂಜೆ ಜೊತೆ ವಾಹನವಾಗಿರುವ ಪಕ್ಷಿ, ಪ್ರಾಣಿಗಳ ಪೂಜೆ ನಡೆಯುತ್ತದೆ. ವಾಹನಗಳ ಪೂಜೆ ಮಾಡಿದ್ರೆ ಫಲ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಈ ಪಕ್ಷಿಗಳ ಬಗ್ಗೆ ಶಾಸ್ತ್ರದಲ್ಲಿ ಅನೇಕ ವಿಷ್ಯಗಳನ್ನು ಹೇಳಲಾಗಿದೆ. ಮನೆಗೆ ಅಚಾನಕ್ ಆಗಿ ಗಿಳಿ ಬಂದ್ರೆ ಧನ ಲಾಭವಾಗುತ್ತದೆ ಎಂದು ನಂಬಲಾಗಿದೆ. ನಾಯಿ, ದನ, ಕುರಿಗೆ ಆಹಾರ ನೀಡಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದ್ರ ಜೊತೆ ಅವುಗಳಿಗೆ ನೀರು ಕುಡಿಸಬೇಕೆಂದೂ ಹೇಳಲಾಗಿದೆ.
ಪಕ್ಷಿಗಳಿಂದ ಮುಂದಿನ ದಿನಗಳ ಬಗ್ಗೆ ಸೂಚನೆ ಸಿಗುತ್ತದೆಯಂತೆ. ಪಕ್ಷಿಗಳ ಸೇವೆಯಿಂದ ಅವ್ರ ಆಶೀರ್ವಾದ ಸಿಕ್ಕು ಒಳ್ಳೆಯದಾಗುತ್ತದೆ ಎಂದು ನಂಬಲಾಗಿದೆ. ಕಾರ್ತಿಕೇಯನ ವಾಹನ ನವಿಲು. ಸರಸ್ವತಿ ಹಂಸದ ಮೇಲೆ ಕುಳಿತಿದ್ದಾಳೆ. ವಿಷ್ಣುವಿನ ವಾಹನ ಗರುಡ. ಶನಿ ದೇವರ ವಾಹನ ಕಾಗೆ.
ಗೂಬೆ ಲಕ್ಷ್ಮಿ ವಾಹನವಾಗಿದೆ. ಗೂಬೆ ಕಾಣಿಸಿಕೊಂಡ್ರೆ ಮನೆಗೆ ನೆಂಟರು ಬರ್ತಾರೆಂಬ ನಂಬಿಕೆಯಿದೆ. ಕಾಗೆ ಕೂಗಿದ್ರೆ ಕೂಡ ಮನೆಗೆ ನೆಂಟರು ಬರ್ತಾರೆ ಎನ್ನಲಾಗುತ್ತದೆ. ಕಾಗೆ ಕೂಗುವ ವಿಧದಲ್ಲೂ ಬದಲಾವಣೆಯಿದೆ. ಕಾಗೆ ಕೆಟ್ಟದಾಗಿ ಕೂಗಿದ್ರೆ ಪೂರ್ವಜರು ತೃಪ್ತರಾಗಿಲ್ಲ ಎನ್ನಲಾಗುತ್ತದೆ. ಮನೆಯಲ್ಲಿ ಪಾರಿವಾಳ ಬಂದ್ರೆ ಕಳ್ಳತನವಾಗುವ ಸಂಕೇತ ಎಂದು ನಂಬಲಾಗಿದೆ. ಕುಟುಂಬದ ಸದಸ್ಯರ ಮಧ್ಯೆ ಜಗಳವಾಗುತ್ತದೆ ಎಂಬ ನಂಬಿಕೆಯೂ ಇದೆ.