ಮನೆಯಲ್ಲಿ ಹಲ್ಲಿಗಳ ಕಾಟ ವಿಪರೀತವಾಗಿದೆಯೇ? ಇವುಗಳ ನಿವಾರಣೆಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳಬೇಕಿಲ್ಲ. ಆದರೆ ಇವು ನಿಮ್ಮ ಮನೆಯ ಸೊಳ್ಳೆ, ನೊಣ ಹಾಗೂ ಇತರ ಕೀಟಾಣುಗಳನ್ನು ಸೇವಿಸಿ ನಿಮಗೆ ರಕ್ಷಣೆ ನೀಡುತ್ತವೆ ಎಂಬುದನ್ನು ಮರೆಯದಿರಿ. ಆದರೂ ಹಲ್ಲಿ ಕಾಟ ವಿಪರೀತವಾಗಿದ್ದರೆ ಓಡಿಸಲು ಈ ಮಾರ್ಗ ಅನುಸರಿಸಿ.
ಕಾಳುಮೆಣಸಿನ ಪುಡಿಗೆ ತುಸು ಮೆಣಸಿನ ಪುಡಿ ಬೆರೆಸಿ ಸ್ಪ್ರೇ ತಯಾರಿಸಿ. ಇದನ್ನು ಹಲ್ಲಿ ಹೆಚ್ಚು ಓಡಾಡುವ ಜಾಗದಲ್ಲಿ ಸಿಂಪಡಿಸಿ. ಇದರಿಂದ ಹಲ್ಲಿಗೆ ಅಲರ್ಜಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಹಾಗೂ ಅಲ್ಲಿಂದ ದೂರವಾಗುತ್ತವೆ.
ಎಂಇಎಸ್ ಪುಂಡಾಟಿಕೆ ವಿರುದ್ಧ ಸರ್ವಾನುಮತದ ಖಂಡನಾ ನಿರ್ಣಯ ಅಂಗೀಕಾರ: ದೇಶದ್ರೋಹದ ಕೇಸ್ ದಾಖಲು; ಸಿಎಂ ಗುಡುಗು
ಮೊಟ್ಟೆ ಬಳಸಿದ ಬಳಿಕ ಅದರ ಸಿಪ್ಪೆಯನ್ನು ಎಸೆಯುವ ಬದಲು ಹಲ್ಲಿಗಳನ್ನು ಓಡಿಸಲು ಬಳಸಿ. ಮೊದಲು ಹೊರಭಾಗವನ್ನು ಟಿಶ್ಯೂ ಸಹಾಯದಿಂದ ಸ್ವಚ್ಛವಾಗಿ ಒರೆಸಿ. ಒಣಗಿಸಿ. ಇದನ್ನು ಹಲ್ಲಿ ಓಡಾಡುವ ಜಾಗದಲ್ಲಿಡಿ. ಇದರ ವಾಸನೆ ಹಲ್ಲಿಗಳಿಗೆ ಕಿರಿಕಿರಿ ಉಂಟು ಮಾಡುತ್ತದೆ. ಹಾಗೂ ಅವುಗಳನ್ನು ಓಡಿಸುವುದು ಸುಲಭವಾಗುತ್ತದೆ.
ಈರುಳ್ಳಿ ಅಥವಾ ಬೆಳ್ಳುಳ್ಳಿ ವಾಸನೆ ಕೂಡಾ ಹಲ್ಲಿಗೆ ಇಷ್ಟವಾಗುವುದಿಲ್ಲ. ಇದನ್ನು ಹಲ್ಲಿ ಓಡಾಡುವ ಜಾಗದಲ್ಲಿ ಇಡುವುದರಿಂದ ಇಲ್ಲವೇ ಫ್ಯಾನ್ ಹಿಂಭಾಗದಲ್ಲಿ ಇಡುವುದರಿಂದ ಕೊಠಡಿಯಿಡೀ ವಾಸನೆ ಬಂದು ಹಲ್ಲಿಗಳು ದೂರವಾಗುತ್ತವೆ.