
ಪ್ರತಿನಿತ್ಯ ಮನೆಯಲ್ಲಿ ಯಾರಾದರೊಬ್ಬರು ಹೊರಗೆ ಹೋಗುತ್ತಿರುತ್ತಾರೆ. ಅಂದಹಾಗೇ ಅವರು ಹೊರಗೆ ಹೋದ ಕೆಲಸ ಸಂಪೂರ್ಣವಾಗಲು ಮತ್ತು ಅವರು ಸುರಕ್ಷಿತವಾಗಿ ಮನೆಗೆ ಮರಳಬೇಕೆಂದರೆ ಹೊರಗೆ ಹೋಗುವ ಮುನ್ನ ಈ ಸಣ್ಣ ನಿಯಮವನ್ನು ಪಾಲಿಸಿ .
ಮನೆಯಿಂದ ಹೊರಗೆ ಹೋಗುವಾಗ ಮನೆಯ ಮುಖ್ಯ ದ್ವಾರದ ಹೊಸ್ತಿಲನ್ನು ಶುಭ್ರಗೊಳಿಸಿ. ಹೊಸ್ತಿಲಿನ ಎರಡು ತುದಿಯಲ್ಲಿ ಸ್ವಲ್ಪ ಅಕ್ಕಿ ಕಾಳನ್ನು ಹಾಕಿ ನಮಸ್ಕರಿಸಿ. ಬಳಿಕ ಮನೆಯಿಂದ ಹೊರಗೆ ಹೋಗಬೇಕು. ಇದರಿಂದ ನಿಮ್ಮ ಕೆಲಸ ಕಾರ್ಯ ಸಫಲವಾಗುತ್ತದೆ. ವ್ಯಾಪಾರದಲ್ಲಿ ಲಾಭವಾಗುತ್ತದೆ.
ಅನಂತರ ಸಂಜೆಯ ವೇಳೆ ಮನೆಯಲ್ಲಿರುವ ಸದಸ್ಯರೊಬ್ಬರು ದೇವರಿಗೆ ದೀಪ ಹಚ್ಚುವ ವೇಳೆ ಆ ಅಕ್ಕಿಯನ್ನು ತೆಗೆದು ಮರದ ಬುಡಕ್ಕೆ ಹಾಕಬೇಕು. ಇದರಿಂದ ಜೀವನದಲ್ಲಿ ಏಳಿಗೆಯಾಗುತ್ತದೆ.