ಮನೆಯಲ್ಲೇ ಕುಳಿತು ಮಾಡಲು ಯಾವ ಬ್ಯುಸಿನೆಸ್ ಬೆಸ್ಟ್ ಎಂಬುದನ್ನು ಅನೇಕರು ಹುಡುಕುತ್ತಿದ್ದಾರೆ. ಹೆಚ್ಚಿನ ಬಂಡವಾಳವಿಲ್ಲದೆ ಸುಲಭವಾಗಿ ಶುರು ಮಾಡುವ ವ್ಯಾಪಾರದ ಬಗ್ಗೆ ಚಿಂತನೆ ನಡೆಸುತ್ತಾರೆ. ಮನೆಯಲ್ಲೇ ಕುಳಿತು ಕಡಿಮೆ ಬಂಡವಾಳದಲ್ಲಿ ಬ್ಯುಸಿನೆಸ್ ಮಾಡಲು ನೀವು ಬಯಸಿದ್ದರೆ ನೀವು ಉಪ್ಪಿನಕಾಯಿ ವ್ಯಾಪಾರ ಶುರು ಮಾಡಬಹುದು.
ಇದನ್ನು ಮನೆಯಲ್ಲಿ ಸಣ್ಣ ಮಟ್ಟದಲ್ಲಿಯೂ ಶುರು ಮಾಡಬಹುದು. ವ್ಯಾಪಾರ ಶುರು ಮಾಡಲು 10 ಸಾವಿರ ರೂಪಾಯಿ ಖರ್ಚಾಗುತ್ತದೆ. ಮೊದಲ ತಿಂಗಳಿನಿಂದಲೇ ನೀವು 20ರಿಂದ 30 ಸಾವಿರ ರೂಪಾಯಿ ಗಳಿಕೆ ಶುರು ಮಾಡುತ್ತೀರಿ. ಪ್ಯಾಕೇಜಿಂಗ್ ಹಾಗೂ ಉತ್ಪನ್ನದಲ್ಲಿ ಸುಧಾರಣೆ ಮಾಡಿ ನೀವು ಇನ್ನಷ್ಟು ಗಳಿಸಬಹುದು.
ಉಪ್ಪಿನಕಾಯಿಯನ್ನು ಆನ್ಲೈನ್, ಸಗಟು, ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. 900 ಚದರ ಅಡಿ ಜಾಗ ಬೇಕಾಗುತ್ತದೆ. ಉಪ್ಪಿನಕಾಯಿ ತಾಜಾ ಮತ್ತು ದೀರ್ಘಕಾಲ ಉಳಿಯಲು ಸ್ವಚ್ಛತೆ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಈ ವ್ಯಾಪಾರ ಶುರು ಮಾಡಲು ಪರವಾನಿಗೆ ಅಗತ್ಯವಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ನೀವು ಅನುಮತಿ ಪಡೆಯಬೇಕು. ಮೊದಲ ದಿನದಿಂದಲೇ ಇದ್ರಲ್ಲಿ ಲಾಭ ಸಿಗಲು ಶುರುವಾಗುತ್ತದೆ. ಆದ್ರೆ ನಿಮ್ಮ ಉತ್ಪನ್ನದ ಬಗ್ಗೆ ಪ್ರಚಾರ ಮಾಡುವುದು ಅಗತ್ಯವಾಗುತ್ತದೆ.