alex Certify ಮನೆಯವರ ಆರೋಗ್ಯಕ್ಕಾಗಿ ವಾಸ್ತು ಪ್ರಕಾರ ಹೀಗಿರಲಿ ಡೈನಿಂಗ್ ರೂಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಯವರ ಆರೋಗ್ಯಕ್ಕಾಗಿ ವಾಸ್ತು ಪ್ರಕಾರ ಹೀಗಿರಲಿ ಡೈನಿಂಗ್ ರೂಂ

ಮನೆಯಲ್ಲಿ ಊಟ ತಿಂಡಿಗಾಗಿ ಪ್ರತ್ಯೇಕ ಸ್ಥಳವಿದ್ದು, ವಾಸ್ತು ನಿಯಮಗಳನ್ನು ಅನುಸರಿಸಿದರೆ ಮನೆಮಂದಿಯೆಲ್ಲ ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಇದಕ್ಕೆ ಇಲ್ಲಿದೆ ಒಂದಿಷ್ಟು ವಾಸ್ತು ಟಿಪ್ಸ್.

* ಪಶ್ಚಿಮ ಭಾಗದಲ್ಲಿ ಊಟದ ಪ್ರದೇಶ ಇರುವುದು ಅತ್ಯುತ್ತಮ. ಅದು ಬಿಟ್ಟರೆ ಉತ್ತರ ಅಥವಾ ಪೂರ್ವವನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು.

* ಡೈನಿಂಗ್ ರೂಂ ಯಾವಾಗಲೂ ಸಾಕಷ್ಟು ವಿಶಾಲವಾಗಿರಬೇಕು. ಇಕ್ಕಟ್ಟಿನ ಜಾಗ ಬೇಡ.

* ಊಟ ಮಾಡುವಾಗ ಕುಟುಂಬದ ಮುಖ್ಯಸ್ಥರು ಪೂರ್ವಕ್ಕೆ ಮತ್ತು ಉಳಿದವರು ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇರಲಿ.

* ಡೈನಿಂಗ್ ಟೇಬಲ್ ನ ಆಗ್ನೇಯ ಮೂಲೆಯಲ್ಲಿ ಮಕ್ಕಳು ಕುಳಿತು ಊಟ ಮಾಡಬಾರದು. ತಪ್ಪಿದರೆ ಮಕ್ಕಳು ಹೆತ್ತವರ ಮಾತು ಕೇಳದೆ ಇರುವ ಸಾಧ್ಯತೆ ಇದೆ.

* ಊಟ ಮಾಡುವಾಗ ಕುಟುಂಬದ ಯಾವುದೇ ಸದಸ್ಯರು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳಬಾರದು.

* ಚೌಕ ಅಥವಾ ಆಯತಾಕಾರದ ಡೈನಿಂಗ್ ಟೇಬಲ್ ಅತ್ಯುತ್ತಮ. ವೃತ್ತಾಕಾರ, ಅಂಡಾಕಾರ ಅಥವಾ ಇನ್ಯಾವುದೇ ಆಕಾರದ ಟೇಬಲ್ ಬೇಡ.

* ಡೈನಿಂಗ್ ರೂಂನ ನೈರುತ್ಯ ಮೂಲೆಗೆ ಹೊಂದುವಂತೆ ಟೇಬಲ್ ಹಾಕಬೇಕು. ಆದರೆ ಟೇಬಲ್ ಗೋಡೆಗೆ ತಾಗುವಂತೆ ಇರಬಾರದು. ಕುಡಿಯುವ ನೀರು ಇಡಲು ಈಶಾನ್ಯ ಭಾಗವನ್ನು ಬಳಸಿಕೊಳ್ಳಿ.

* ಡೈನಿಂಗ್ ರೂಂ ಗೆ ಪೂರ್ವ, ಪಶ್ಚಿಮ ಅಥವಾ ಉತ್ತರ ದಿಕ್ಕಿನಲ್ಲಿ ಬಾಗಿಲು ಇರಲಿ. ಆದರೆ ದಕ್ಷಿಣ ದಿಕ್ಕಿನಲ್ಲಿ ಇರಲೇ ಬಾರದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...