ಮೆನಿಕ್ಯೂರ್ ಮಾಡುವುದರಿಂದ ಕೆಲವು ಪ್ರಯೋಜನಗಳಿವೆ. ಮಸಾಜ್ ಸಮಯದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಉಗುರುಗಳು ಮೃದುವಾಗಿ, ಹೊಳೆಯುತ್ತವೆ. ಉಗುರುಗಳು ಮುರಿದು ಹೋಗುವುದಿಲ್ಲ. ಮೆನಿಕ್ಯೂರನ್ನು ಮನೆಯಲ್ಲಿಯೂ ಸುಲಭವಾಗಿ ಮಾಡಬಹುದು.
ಮೊದಲು ಉಗುರುಗಳ ಮೇಲೆ ನೇಲ್ ಪಾಲಿಷ್ ಇದ್ದರೆ ಅದನ್ನು ನೇಲ್ ಪಾಲಿಶ್ ರಿಮೂವರ್ ಬಳಸಿ ತೆಗೆಯಿರಿ. ಇದಕ್ಕೆ ಕಾಟನ್ ಪ್ಯಾಡ್ ಬಳಸಿ. ನಿಮ್ಮ ಉಗುರುಗಳನ್ನು ಟ್ರಿಮ್ ಮಾಡಿ. ಇದಕ್ಕೆ ಉಗುರು ಕ್ಲಿಪ್ಪರ್‌ಗಳನ್ನು ಬಳಸಿ. ಇದರ ನಂತರ ನಿಮ್ಮ ಉಗುರುಗಳಿಗೆ ಬೇಕಾದ ಆಕಾರ ನೀಡಿ. ನಂತ್ರ ಉಗುರು ಬೆಚ್ಚಗಿನ ನೀರಿಗೆ ಶಾಂಪೂ ಹಾಕಿ ಕೈಗಳನ್ನು ಸುಮಾರು ಐದು ನಿಮಿಷಗಳ ಕಾಲ ಮುಳುಗಿಸಿಡಿ. ನಂತ್ರ ಕೈಗಳು, ಬೆರಳುಗಳು ಮತ್ತು ಉಗುರುಗಳ ಕೊಳೆಯನ್ನು ಸ್ವಚ್ಛಗೊಳಿಸಿ.
ನಂತರ ಉಗುರುಗಳು ಮತ್ತು ಕೈಗಳನ್ನು ಚೆನ್ನಾಗಿ ಒರೆಸಿ ಮತ್ತು ಉಗುರುಗಳನ್ನು ಹೊರಭಾಗಕ್ಕೆ ಕೆನೆ ಬಳಸಿ ಮಸಾಜ್ ಮಾಡಿ. ಉತ್ತಮ ಮಾಯಿಶ್ಚರೈಸರ್ ಬಳಸಲು ಮರೆಯದಿರಿ. ಕೈ ಒಣಗಿದ ನಂತ್ರ ನಿಮಗಿಷ್ಟವಾದ ನೇಲ್ ಪಾಲಿಶ್ ಹಚ್ಚಿ.