ಜಾಮ್ ಎಂದರೆ ಸಾಕು ಮಕ್ಕಳು ಬಾಯಲ್ಲಿ ನೀರು ಬರುತ್ತದೆ.
ದೊಡ್ಡವರು ಕೂಡ ಈ ಜಾಮ್ ಪ್ರಿಯರೆ ಎನ್ನಬಹುದು. ಚಪಾತಿ, ದೋಸೆ, ಮಾಡಿದಾಗ ಜಾಮ್ ಇದ್ದರೆ ತಿನ್ನಲು ಚೆನ್ನಾಗಿರುತ್ತದೆ. ಹೊರಗಡೆಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಮಾಡಿ ತಿನ್ನಿ.
ಬೇಕಾಗುವ ಸಾಮಗ್ರಿಗಳು:
1 ಕೆಜಿ ಮಿಕ್ಸ್ಡ್ ಫ್ರೂಟ್ಸ್ ತೆಗೆದುಕೊಳ್ಳಿ. (ಸಿಪ್ಪೆ ತೆಗೆಯುವ ಹಣ್ಣು ಇದ್ದರೆ ಸಿಪ್ಪೆ ತೆಗೆಯಿರಿ), 1 ಕೆಜಿ – ಸಕ್ಕರೆ, ¼ ಕಪ್ – ಲಿಂಬೆಹಣ್ಣಿನ ರಸ.
ಮಾಡುವ ವಿಧಾನ:
ಕತ್ತರಿಸಿದ ಹಣ್ಣುಗಳನ್ನು ಒಂದು ದೊಡ್ಡ ಸ್ಟೀಲ್ ಬೌಲ್ ಗೆ ಹಾಕಿ ಹಣ್ಣುಗಳು ಮುಳುಗುವಷ್ಟು ನೀರು ಹಾಕಿ ರಾತ್ರಿಯಿಡೀ ಹಾಗೇ ಇಡಿ. ಬೆಳಿಗ್ಗೆ ಇದನ್ನು ಒಂದು ದಪ್ಪ ತಳದ ಪಾತ್ರೆಗೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಇದು ಮೆತ್ತಗಾದ ಮೇಲೆ ಇದನ್ನು ಸೋಸಿಕೊಳ್ಳಿ.
ನಂತರ ಸೋಸಿಕೊಂಡ ಮಿಶ್ರಣವನ್ನು ಚೆನ್ನಾಗಿ ಕುದಿಸಿಕೊಳ್ಳಿ ಈ ಮಿಶ್ರಣ ಸ್ವಲ್ಪ ದಪ್ಪಗಾಗುತ್ತಿದ್ದಂತೆ ಸಕ್ಕರೆ, ಲಿಂಬೆಹಣ್ಣಿ ರಸ ಸೇರಿಸಿ ಉರಿ ಕಡಿಮೆ ಮಾಡಿಕೊಂಡು ಸಕ್ಕರೆ ಕರಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಸಿಕೊಳ್ಳಿ. ಇದು ಜಾಮ್ ನ ಹದಕ್ಕೆ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಗಾಳಿಯಾಡದ ಜಾರ್ ನಲ್ಲಿ ತುಂಬಿಸಿಡಿ.